ದಿಲ್ಲಿ ಮದ್ಯ ಹಗರಣದಲ್ಲಿ ಮಾಫಿ ಸಾಕ್ಷಿಯಾದ ಆರೋಪಿಯಿಂದ ಬಿಜೆಪಿಗೆ ರೂ. 30 ಕೋಟಿ !

Update: 2024-03-22 06:17 GMT

Photo credit: scroll.in

ಹೊಸದಿಲ್ಲಿ: ದಿಲ್ಲಿ ಮದ್ಯ ಹಗರಣದಲ್ಲಿ ಗುರುವಾರ ಜಾರಿ ನಿರ್ದೇಶನಾಲಯ (ಈಡಿ) ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸುವ ಕೆಲವೇ ಗಂಟೆಗಳಿಗೆ ಮುನ್ನ ಬಿಡುಗಡೆಗೊಂಡ ಚುನಾವಣಾ ಬಾಂಡ್‌ ಕುರಿತು ಹೊಸ ಅಂಕಿಅಂಶಗಳಲ್ಲಿ ಒಂದು ಪ್ರಮುಖ ಅಂಶ ಬಯಲಾಗಿದೆ.

ದಿಲ್ಲಿ ಮದ್ಯ ಹಗರಣದಲ್ಲಿ ಆರೋಪಿ ಎಂದು ಗುರುತಿಸಲಾಗಿದ್ದ ಪಿ ಶರತ್‌ ಚಂದ್ರ ರೆಡ್ಡಿ ಅವರು ನಿರ್ದೇಶಕರಾಗಿರುವ ಅರೊಬಿಂದೋ ಫಾರ್ಮಾ, 2022 ರಲ್ಲಿ ರೆಡ್ಡಿ ಅವರನ್ನು ಈ ಪ್ರಕರಣದಲ್ಲಿ ಈಡಿ ಬಂಧಿಸಿದ ಕೇವಲ ಐದು ದಿನಗಳಲ್ಲಿ ಬಿಜೆಪಿಗೆ ಬಾಂಡ್‌ಗಳ ಮೂಲಕ ರೂ. 5 ಕೋಟಿ ದೇಣಿಗೆ ನೀಡಿತ್ತು. ಈ ಪ್ರಕರಣದಲ್ಲಿ ರೆಡ್ಡಿ ಅನುಮೋದಕರಾದ (ಅಪ್ರೂವರ್) ನಂತರ ಅವರ ಸಂಸ್ಥೆ ಇನ್ನೂ ರೂ. 25 ಕೋಟಿ ದೇಣಿಗೆಯನ್ನು ಬಿಜೆಪಿಗೆ ನೀಡಿತ್ತು.

ಹೈದರಾಬಾದ್‌ ಮೂಲದ ಉದ್ಯಮಿಯಾಗಿರುವ ಶರತ್‌ ಚಂದ್ರ ರೆಡ್ಡಿ ತಮ್ಮ ತಂದೆ ಸ್ಥಾಪಿಸಿದ ಅರೊಬಿಂದೋ ಫಾರ್ಮಾದ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಜಾರಿ ನಿರ್ದೇಶನಾಲಯವು ಅವರನ್ನು ನವೆಂಬರ್11, 2022ರಲ್ಲಿ ಬಂಧಿಸಿದ್ದರೆ ನವೆಂಬರ್ 15ರಂದು ಅವರ ಅರೊಬಿಂದೋ ಫಾರ್ಮಾ ರೂ. 5 ಕೋಟಿ ದೇಣಿಗೆ ನೀಡಿತ್ತು. ನವೆಂಬರ್‌ 21 ರಂದೇ ಇದನ್ನು ಬಿಜೆಪಿ ನಗದೀಕರಿಸಿತ್ತು. ಶರತ್‌ ಈ ಪ್ರಕರಣದಲ್ಲಿ ಜೂನ್‌ 2023ರಲ್ಲಿ ಅಪ್ರೂವರ್‌ ಆಗಿದ್ದರೆ ನವೆಂಬರ್‌ 2023ರಲ್ಲಿ ಅವರ ಸಂಸ್ಥೆ ಬಿಜೆಪಿಗೆ ರೂ. 25 ಕೋಟಿ ದೇಣಿಗೆ ನೀಡಿತ್ತು.

ಈ ಸಂಸ್ಥೆ ಒಟ್ಟು ರೂ. 52 ಕೋಟಿ ಮೌಲ್ಯದ ಬಾಂಡ್‌ ಖರೀದಿಸಿದ್ದರೆ ಅದರಲ್ಲಿ ರೂ. 34.5 ಕೋಟಿ ಬಿಜೆಪಿಗೆ ರೂ. 15 ಕೋಟಿ ಬಿಆರ್‌ಎಸ್‌ ಗೆ ಹಾಗೂ ರೂ. 2.5 ಕೋಟಿ ತೆಲುಗು ದೇಶಂ ಪಕ್ಷಕ್ಕೆ ಹೋಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News