ಭಾರತೀಯರು ಡೋಲೊ-650 ಅನ್ನು ಕ್ಯಾಡಬರಿ ಜೆಮ್ಸ್‌ನಂತೆ ತಿನ್ನುತ್ತಿದ್ದಾರೆ: ಮಾತ್ರೆ ನುಂಗುವ ಕುರಿತು ವೈದ್ಯರ ಪೋಸ್ಟ್ ವೈರಲ್

Update: 2025-04-17 15:49 IST
ಭಾರತೀಯರು ಡೋಲೊ-650 ಅನ್ನು ಕ್ಯಾಡಬರಿ ಜೆಮ್ಸ್‌ನಂತೆ ತಿನ್ನುತ್ತಿದ್ದಾರೆ: ಮಾತ್ರೆ ನುಂಗುವ ಕುರಿತು ವೈದ್ಯರ ಪೋಸ್ಟ್ ವೈರಲ್

ಸಾಂದರ್ಭಿಕ ಚಿತ್ರ | PC : X  

  • whatsapp icon

ಹೊಸದಿಲ್ಲಿ: ಭಾರತದಲ್ಲಿ ಪ್ಯಾರಾಸಿಟಮಲ್ ವ್ಯಾಪಕವಾಗಿ ಲಭ್ಯವಿದ್ದು, ಹಲವರು ಸಣ್ಣದೊಂದು ಜ್ವರದ ಲಕ್ಷಣವಿದ್ದರೂ ಅದನ್ನು ತೆಗೆದುಕೊಳ್ಳುತ್ತಾರೆ. ವಿವಿಧ ಬ್ರ್ಯಾಂಡ್‌ಗಳ ಪೈಕಿ ಡೋಲೊ 650 ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಂಡಿದ್ದು,ಅದರ ಬಳಕೆಯು ಗಮನಾರ್ಹವಾಗಿ ಹೆಚ್ಚಿದೆ. ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಪ್ರವೃತ್ತಿಯನ್ನು ಎತ್ತಿ ತೋರಿಸಿರುವ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಆರೋಗ್ಯ ಶಿಕ್ಷಕ ಪಳನಿಯಪ್ಪನ್ ಮಾಣಿಕ್ಯಂ ಅವರು,‘ಭಾರತೀಯರು ಡೋಲೊ 650ನ್ನು ಕ್ಯಾಡ್‌ಬರಿ ಜೆಮ್‌ನಂತೆ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸುವ ಮೂಲಕ ಅದರ ವ್ಯಾಪಕ ಬಳಕೆಯನ್ನು ಒತ್ತಿ ಹೇಳಿದ್ದಾರೆ.

ಡೋಲೊ 650 ಜ್ವರ,ತಲೆನೋವು,ಮೈಕೈನೋವು ಇತ್ಯಾದಿಗಳಿಗೆ ವೈದ್ಯರು ಸಾಮಾನ್ಯವಾಗಿ ಶಿಫಾರಸು ಮಾಡುವ ಮಾತ್ರೆಯಾಗಿದೆ. ವೈದ್ಯರ ನಿರ್ದೇಶನದ ಮೇರೆಗೆ ಸೇವಿಸಿದರೆ ಅದು ಪರಿಣಾಮಕಾರಿ ಮತ್ತು ಸುರಕ್ಷಿತವೂ ಹೌದು. ಆದರೆ ಯಾವುದೇ ಔಷಧಿಯಂತೆ ಈ ಮಾತ್ರೆಯ ಅತಿಯಾದ ಬಳಕೆಯು ವಿಶೇಷವಾಗಿ ಯಕೃತ್ತಿಗೆ ಹಾನಿಕಾರಕವಾಗಬಲ್ಲದು. ಆದ್ದರಿಂದ ವೈದ್ಯಕೀಯ ಸಲಹೆ ಮತ್ತು ಶಿಫಾರಸು ಮಾಡಿದ ಡೋಸ್ ಅನುಸರಿಸುವುದು ಅಗತ್ಯವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಲಸಿಕೆಯ ಅಡ್ಡಪರಿಣಾಮಗಳನ್ನು ನಿವಾರಿಸಲು ಪ್ಯಾರಾಸಿಟಮಲ್ ತೆಗೆದುಕೊಳ್ಳುವಂತೆ ಜನರಿಗೆ ಸೂಚಿಸಿದ ಬಳಿಕ ಡೋಲೊ 650ರ ಜನಪ್ರಿಯತೆ ಹೆಚ್ಚಿತ್ತು.

ಡೋಲೊಪರ್ ಮಾತ್ರೆಯ ಉತ್ತರಾಧಿಕಾರಿಯಾಗಿರುವ ಡೋಲೊ 650 ಪ್ಯಾರಾಸಿಟಮಲ್‌ನ್ನು ಒಳಗೊಂಡಿದ್ದು,ಇದು ನೋವು,ಉರಿಯೂತ ಮತ್ತು ಜ್ವರದ ಸಂವೇದನೆಗಳನ್ನುಂಟು ಮಾಡುವ ಪ್ರೊಸ್ಟಾಗ್ಲಾಂಡಿನ್ ಬಿಡುಗಡೆಯನ್ನು ತಡೆಯುತ್ತದೆ. ಇದು ಜ್ವರವಿದ್ದಾಗ ದೇಹದ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ.

ಫೋರ್ಬ್ಸ್ ಪ್ರಕಾರ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಭುಗಿಲೆದ್ದ ಬಳಿಕ ಮೈಕ್ರೋ ಲ್ಯಾಬ್ಸ್ 350 ಕೋಟಿ ಗೂ.ಅಧಿಕ ಡೋಲೊ 650 ಮಾತ್ರೆಗಳನ್ನು ಮಾರಾಟ ಮಾಡುವ ಮೂಲಕ ಒಂದೇ ವರ್ಷದಲ್ಲಿ 400 ಕೋಟಿ ರೂ.ಗಳ ಆದಾಯವನ್ನು ಗಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News