ಮತ್ತೊಂದು ಸಾಹಸಕ್ಕೆ ಇಸ್ರೋ ಸಜ್ಜು; ಆದಿತ್ಯ-ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ
Update: 2023-09-02 05:34 GMT
ಹೊಸದಿಲ್ಲಿ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಆದಿತ್ಯ-ಎಲ್ 1 ಅಂತರಿಕ್ಷ ವೀಕ್ಷಣಾಲಯವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ ಎಲ್ ವಿ-ಸಿ 57 ರಾಕೆಟ್ ಮೂಲಕ ಇಂದು ಬೆಳಗ್ಗೆ 11:50ಕ್ಕೆ ಉಡ್ಡಯನ ಮಾಡಲು ಕ್ಷಣಗಣನೆ ಆರಂಭವಾಗಿದೆ.
ಆದಿತ್ಯ ಎಲ್ 1 ಉಪಗ್ರಹವು ಸೂರ್ಯನ ವಿವರವಾದ ಅಧ್ಯಯನವನ್ನು ಮಾಡಲು 7 ವಿಭಿನ್ನ ಪೇ ಲೋಡ್ ಗಳನ್ನು ಒಯ್ಯುತ್ತದೆ. ಅದರಲ್ಲಿ 4 ಸೂರ್ಯನ ಬೆಳಕನ್ನು ವೀಕ್ಷಿಸುತ್ತದೆ ಹಾಗೂ ಇತರ 3 ಪ್ಲಾಸ್ಮಾ ಹಾಗೂ ಕಾಂತೀಯ ಕ್ಷೇತ್ರಗಳ ಇನ್ ಸಿಟು ನಿಯತಾಂಕಗಳನ್ನು ಅಳೆಯುತ್ತದೆ.