ಲೋಕಸಭಾ ಚುನಾವಣೆ | ಸರನ್ ನಲ್ಲಿ ಲಾಲು ಪುತ್ರಿ ವಿರುದ್ಧ ಕಣದಲ್ಲಿ 'ಲಾಲೂ ಪ್ರಸಾದ್ ಯಾದವ್'!

Update: 2024-05-02 07:36 GMT

Photo: PTI

ಪಾಟ್ನಾ : ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪ್ರತಿನಿಧಿಸುತ್ತಿದ್ದ ಸರಣ್ ಲೋಕಸಭಾ ಕ್ಷೇತ್ರವನ್ನು ಮತ್ತೆ ಪಕ್ಷಕ್ಕೆ ಮರಳಿ ಪಡೆಯಲು, ಲಾಲು ಪುತ್ರಿ ರೋಹಿಣಿ ಆಚಾರ್ಯ ಪ್ರಯತ್ನಿಸುತ್ತಿದ್ದರೆ, ಕ್ಷೇತ್ರದಲ್ಲಿ ಅವರ ತಂದೆಯ ಹೆಸರಿನ ಅಭ್ಯರ್ಥಿಯೇ ಸವಾಲಾಗಿದ್ದಾರೆ.

ಬಿಹಾರದ ಸರನ್ ಜಿಲ್ಲೆಯ ರೈತ ʼಲಾಲೂʼ ಪ್ರಸಾದ್ ಯಾದವ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ ಅವರು ಎಪ್ರಿಲ್ 26 ರಂದು ಸರನ್ ಲೋಕಸಭಾ ಸ್ಥಾನಕ್ಕೆ ರಾಷ್ಟ್ರೀಯ ಜನಸಂಭವನ ಪಕ್ಷದ (ಆರ್‌ಜೆಪಿ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ʼಲಾಲೂʼ ಪ್ರಸಾದ್ ಯಾದವ್ ಅವರು 2022ರಲ್ಲಿ ರಾಷ್ಟ್ರಪತಿ ಚುನಾವಣೆಗೂ ನಾಮಪತ್ರ ಸಲ್ಲಿಸಿದ್ದರು. ಅವರು 2017 ರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಇದು ಆಗಿನ ಬಿಹಾರ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ನಡುವಿನ ಸ್ಪರ್ಧೆಯಾಗಿತ್ತು.2017 ರ ರಾಷ್ಟ್ರಪತಿ ಚುನಾವಣೆಯಲ್ಲಿ ಅವರ ನಾಮಪತ್ರವನ್ನು ಅನುಮೋದಕರಿಲ್ಲದ ಕಾರಣ ತಿರಸ್ಕರಿಸಲಾಗಿತ್ತು.

"ನಾನು ಕಳೆದ ಹಲವು ಅವಧಿಗಳಿಂದ ಸರನ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧವೂ ಸ್ಪರ್ಧಿಸಿದ್ದೆ. ಈ ಬಾರಿ ಅವರ ಪುತ್ರಿ ರೋಹಿಣಿ ಆಚಾರ್ಯ ವಿರುದ್ಧ ಸ್ಪರ್ಧಿಸುತ್ತಿದ್ದೇನೆ" ಎಂದು ʼಲಾಲೂʼ ಪ್ರಸಾದ್ ಯಾದವ್ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

"ನಾನು ಜೀವನೋಪಾಯಕ್ಕಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಸಮಾಜಸೇವೆಯನ್ನೂ ಮಾಡುತ್ತೇನೆ. ಪಂಚಾಯತ್‌ನಿಂದ ರಾಷ್ಟ್ರಪತಿ ಚುನಾವಣೆಯವರೆಗೆ ನನ್ನ ಅದೃಷ್ಟ ಪರೀಕ್ಷೆ ಮಾಡುತ್ತಲೇ ಇದ್ದೇನೆ. ಹೋದರೆ ಒಂದು ಕಲ್ಲು, ಬಂದರೆ ಮಾವಿನಕಾಯಿ. ಸರನ್ ಜನರು ನನ್ನೊಂದಿಗಿದ್ದಾರೆ" ಎಂದು ʼಲಾಲೂʼ ಯಾದವ್ ಹೇಳಿದರು.

ಆರ್‌ಜೆಪಿ ಅಭ್ಯರ್ಥಿ ʼಲಾಲೂʼ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರ ಕೈಯಲ್ಲಿ 5 ಲಕ್ಷ ರೂಪಾಯಿ ನಗದು ಹಣ ಇದೆ. ಅವರ ಪತ್ನಿಯು 2 ಲಕ್ಷ ನಗದು ಹೊಂದಿದ್ದಾರೆ. ʼಲಾಲೂʼ 17.60 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 5.20 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News