ಜಮ್ಮು ಕಾಶ್ಮೀರ, ಹರ್ಯಾಣ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

Update: 2024-08-16 11:11 GMT

Photo: X/ANI

ಹೊಸದಿಲ್ಲಿ: ಚುನಾವಣಾ ಆಯೋಗವು ಇಂದು ಜಮ್ಮು & ಕಾಶ್ಮೀರ, ಹರ್ಯಾಣ ರಾಜ್ಯಗಳ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸಿದೆ.

ಹರ್ಯಾಣದಲ್ಲಿ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 1 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅ.4 ರಂದು ಮತಎಣಿಕೆ ನಡೆಯಲಿದೆ. ಹರ್ಯಾಣದ ಶಾಸಕಾಂಗ ಸಭೆಯ ಅವಧಿಯು ನವೆಂಬರ್ 3 ರಂದು ಕೊನೆಗೊಳ್ಳುತ್ತದೆ.

ಜಮ್ಮು & ಕಾಶ್ಮೀರದಲ್ಲಿ 90 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಸೆ.18 ರಂದು ಮೊದಲ ಹಂತ, ಸೆ.25 ರಂದು ಎರಡನೇ ಹಂತ, ಅ.1 ರಂದು ಮೂರನೆ ಹಂತದಲ್ಲಿ ಮತದಾನ ನಡೆಯಲಿದೆ. ಅ.4 ರಂದು ಮತಎಣಿಕೆ ನಡೆಯಲಿದೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News