‌ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡ ಕಮಲ್ ಹಾಸನ್‌‌ ಅವರ ʼಮಕ್ಕಳ್‌ ನೀಧಿ ಮೈಯಂʼ ಪಕ್ಷ

Update: 2024-03-09 11:17 GMT

ಕಮಲ್ ಹಾಸನ್‌ , ಎಂ ಕೆ ಸ್ಟಾಲಿನ್ | Photo : X/@maiamofficial

ಚೆನ್ನೈ: ತಮಿಳುನಾಡಿನ ಆಡಳಿತ ಡಿಎಂಕೆ ಪಕ್ಷವು ನಟ ಕಮಲ್‌ ಹಾಸನ್‌ ಅವರ ಮಕ್ಕಳ್‌ ನೀಧಿ ಮೈಯ್ಯಮ್‌ ಪಕ್ಷದ ಜೊತೆ ಇಂದು ಒಪ್ಪಂದಕ್ಕೆ ಬಂದಿದೆ. ಕಮಲ್ ಹಾಸನ್‌ ಅವರ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ-ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸಿದರೆ 2025 ರಾಜ್ಯಸಭಾ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಒಂದು ಸ್ಥಾನ ನೀಡಲು ಡಿಎಂಕೆ ಒಪ್ಪಿಕೊಂಡಿದೆ.

ಕಮಲ್ ಹಾಸನ್‌ ಅವರ ಪಕ್ಷಕ್ಕೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಡಿಎಂಕೆ ಸ್ಥಾನ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು.

ಕಮಲ್ ಹಾಸನ್‌ ಹಾಗೂ ಡಿಎಂಕೆ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇಂದು ಡಿಎಂಕೆ ಮುಖ್ಯ ಕಾರ್ಯಾಲಯದಲ್ಲಿ ಎರಡೂ ಪಕ್ಷಗಳ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಿದರು.

ದೇಶದ ಒಳಿತಿಗಾಗಿ ತಮ್ಮ ಪಕ್ಷ ಡಿಎಂಕೆ ಜೊತೆ ಮೈತ್ರಿ ಸಾಧಿಸಿದೆ ಎಂದು ಕಮಲ ಹಾಸನ್‌ ಹೇಳಿದ್ದಾರಲ್ಲದೆ ಯಾವುದೇ ಹುದ್ದೆ ಪಡೆಯುವ ಉದ್ದೇಶದಿಂದ ಅಲ್ಲ ಎಂದಿದ್ದಾರೆ.

ಒಪ್ಫಂದದ ಅನುಸಾರ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಹಾಸನ್‌ ಅವರ ಪಕ್ಷ ಪ್ರಚಾರ ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News