ಮಣಿಪುರ ಹಿಂಸಾಚಾರ: ಅನೈತಿಕ ಪೊಲೀಸ್ ಗಿರಿ ಗುಂಪುಗಳನ್ನು ಫೋಷಿಸುವ ಮೂಲಕ ಬಿಜೆಪಿಯಿಂದ ವಿಶ್ವಾಸಾರ್ಹ ಧ್ವನಿಯ ದಮನ; ವರದಿ

Update: 2023-08-16 17:08 GMT

ಸಾಂದರ್ಭಿಕ ಚಿತ್ರ.| Photo: PTI

ಇಂಫಾಲ: ಮಣಿಪುರದಲ್ಲಿ ಬಿಜೆಪಿ ಸರಕಾರ ಅನೈತಿಕ ಪೊಲೀಸ್ ಗಿರಿ ನಡೆಸುವ ಗುಂಪುಗಳಿಗೆ ನೀಡುತ್ತಿರುವ ಪೋಷಣೆ ಹಾಗೂ ಪ್ರಚಾರ ರಾಜ್ಯದಲ್ಲಿ ವಿಶ್ವಾಸಾರ್ಹ ಧ್ವನಿಗಳನ್ನು ವ್ಯವಸ್ಥಿತವಾಗಿ ದಮನಿಸಿವೆ ಎಂದು ಅಖಿಲ ಮಹಿಳಾ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ರಾಜ್ಯ ಸರಕಾರ ಬೆಂಬಲಿತ ಅನೈತಿಕ ಪೊಲೀಸ್ ಗಿರಿ ನಡೆಸುವ ಗುಂಪುಗಳ ವಿಭಜನೀಯ ಹಾಗೂ ದ್ವೇಷ ತುಂಬಿದ ಕಾರ್ಯಸೂಚಿಯ ಮೂಲಕ ವೈಚಾರಿಕ ಹಾಗೂ ಸಮಾಜ ನಿರ್ಮಾಣದ ಧ್ವನಿಗಳನ್ನು ದಮನಿಸಲು ಬಿಜೆಪಿಗೆ ಸಾಧ್ಯವಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. ಸಾಮಾಜಿಕ ಹೋರಾಟಗಾರರಾದ ಮೇಘಾಲಯದ ಏಂಜೆಲಾ ರಂಗಡ್, ಅರುಣಾಚಲಪ್ರದೇಶದ ಜರ್ಜುಮ್ ಎಟೆ, ಅಸ್ಸಾಂ ಮಿನ ರೋಶ್ಮಿ ಗೋಸ್ವಾಮಿ ದಿಲ್ಲಿ ಮೂಲದ ಸಾಮಾಜಿಕ ಹೋರಾಟಗಾರ್ತಿ ಸೈಯದ್ ಹಮೀದ್ ಅವರು ಈ ವರದಿ ಸಲ್ಲಿಸಿದ್ದಾರೆ.

‘‘ಹು ಗೈನ್ಸ್? ಹು ಲಾಸ್?: ಇಂಟೀರಿಯಂ ರಿಫ್ಲೆಕ್ಷನ್ ಫ್ರಂ ಮಣಿಪುರ’’ ಎಂಬ ತನ್ನ ವರದಿಯಲ್ಲಿ ಮಹಿಳಾ ಸಮಿತಿ, ಲಘು ಮೆಷಿನ್ ಗನ್ ಹಾಗೂ ಕೊಂಬ್ಯಾಟ್ ಗನ್ನಿಂದ ಹಿಡಿದು ಮೋರ್ಟರ್ಸ್ ಹಾಗೂ ರಾಕೆಟ್ ಲಾಂಚರ್ ವರೆಗೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ರಾಜ್ಯದಲ್ಲಿ ಪ್ರಸರಣಗೊಂಡಿವೆ ಎಂದು ಹೇಳಿದೆ. ‘‘ಪೊಲೀಸ್ ಠಾಣೆ ಹಾಗೂ ಡಿಪೋಗಳಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಅಥವಾ ಆಧಾರ್ ಕಾರ್ಡ್ ತೋರಿಸಿ ಪಡೆದುಕೊಳ್ಳಲಾಗಿದೆ ಎಂದು ನಮಗೆ ತಿಳಿದು ಬಂದಿದೆ. ಜನರು ಸಾಮಾನ್ಯ ದಿರಿಸಿನಲ್ಲಿ ಅಥವಾ ಸೇನಾ ಸಮವಸ್ತ್ರದಲ್ಲಿ ಎಕೆ 47ಗಳನ್ನು ತಮ್ಮ ಹೆಗಲಿಗೇರಿಸಿಕೊಂಡು ಸಂಚರಿಸುತ್ತಿರುವುದನ್ನು ನಾವು ನೋಡಿದ್ದೇವೆ’’ ಎಂದು ವರದಿ ಹೇಳಿದೆ.

ಮಣಿಪುರದಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳ ವೈಫಲ್ಯವನ್ನು ಕುಕಿ ಹಾಗೂ ಮೈತೈ ಸಮುದಾಯಗಳು ಎತ್ತಿ ತೋರಿಸಿವೆ ಎಂದು ಸಾಮಾಜಿಕ ಹೋರಾಟಗಾರರು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News