143 ಸಂಸದರ ಅಮಾನತಿನ ಬಗ್ಗೆ ಚರ್ಚೆಯಿಲ್ಲ ; ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ರಾಹುಲ್

Update: 2023-12-20 21:26 IST
143 ಸಂಸದರ ಅಮಾನತಿನ ಬಗ್ಗೆ ಚರ್ಚೆಯಿಲ್ಲ ; ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ರಾಹುಲ್

ರಾಹುಲ್ ಗಾಂಧಿ | PHOTO: X

  • whatsapp icon
ಹೊಸದಿಲ್ಲಿ : ಮಾಧ್ಯಮಗಳು ಸಂಸತ್ ನಿಂದ 143 ಸಂಸದರನ್ನು ಅಮಾನತುಗೊಳಿಸಿರುವ ಅತ್ಯಂತ ಗಂಭೀರ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ರನ್ನು ಅನುಕರಣೆ ಮಾಡಲಾದ ಘಟನೆಗೆ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಸಂಸದರು ಅಲ್ಲಿ ಕುಳಿತಿದ್ದರು. ನಾನು ಅವರ ವೀಡಿಯೊ ಮಾಡಿದೆ. ನನ್ನ ವೀಡಿಯೊ ನನ್ನ ಫೋನ್ ನಲ್ಲಿದೆ. ಮಾಧ್ಯಮಗಳು ಅದನ್ನು ತೋರಿಸುತ್ತಿವೆ. ನಮ್ಮ 143 ಸಂಸದರನ್ನು ಸದನದಿಂದ ಹೊರದಬ್ಬಲಾಗಿದೆ. ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಆ ವಿಷಯದಲ್ಲಿ ಮಾಧ್ಯಮಗಳಲ್ಲಿ ಚರ್ಚೆ ಇಲ್ಲ. ಅದಾನಿ ಬಗ್ಗೆ ಚರ್ಚೆಯಿಲ್ಲ, ರಫೇಲ್ ಬಗ್ಗೆ ಚರ್ಚೆಯಿಲ್ಲ, ನಿರುದ್ಯೋಗದ ಬಗ್ಗೆ ಚರ್ಚೆಯಿಲ್ಲ. ನಮ್ಮ ಸಂಸದರು ಅಸಂತುಷ್ಟರಾಗಿದ್ದರು ಮತ್ತು ಹೊರಗೆ ಕುಳಿತಿದ್ದರು. ಆದರೆ ನೀವು ಅನುಕರಣೆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ’’ ಎಂದು ರಾಹುಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News