ಒಡಿಶಾ: ಆನ್ ಲೈನ್ ಗೇಮ್ ನಲ್ಲಿ ಸೋಲು; ಹತಾಶೆಯಿಂದ ಕತ್ತು ಸೀಳಿಕೊಂಡ ಯುವಕ

Update: 2024-02-18 04:15 GMT

Photo: fteepik

ಅಂಗುಲ್: ಆನ್ ಲೈನ್ ಗೇಮ್ ನಲ್ಲಿ ಸತತ ಮೂರು ಬಾರಿ ಸೋತ ಕಾರಣ ಯುವಕನೊಬ್ಬ ಹತಾಶೆಯಿಂದ ತನ್ನ ಕತ್ತು ಸೀಳಿಕೊಂಡ ಅಪರೂಪದ ಘಟನೆ ಒಡಿಶಾದ ಜೆರೆಂಗ್ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜರ್ಪದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ತನ್ನದೇ ಕತ್ತು ಸೀಳಿಕೊಂಡ ಸೌಮ್ಯರಂಜನ್ ನಾಯಕ್ (24) ಕಟಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ದೇಹಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ನಾಯಕ್ ಮೂರು ಬಾರಿ ಸತತ ಸೋಲು ಕಂಡಿದ್ದ, ಇದರಿಂದ ಹತಾಶೆಗೀಡಾಗಿ ತನ್ನದೇ ಕತ್ತನ್ನು ಸೀಳಿಕೊಂಡ ಎಂದು ಪೊಲೀಸರು ಹೇಳಿದ್ದಾರೆ.

ತಕ್ಷಣವೇ ಆತನನ್ನು ಪೋಷಕರು ಅಂಗುಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಟಕ್ ನ ಎಸ್ ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News