ಜೆಎನ್‌ಯು ವಿವಿನಲ್ಲಿ ಎಬಿವಿಪಿ ಬೆಂಬಲಿಗರಿಂದ ಫೆೆಲೆಸ್ತೀನ್ ಧ್ವಜ ಸುಟ್ಟು ಹಾಕಿ ಇಸ್ರೇಲ್ ಪರ ಘೋಷಣೆ

Update: 2025-04-27 20:41 IST
ಜೆಎನ್‌ಯು ವಿವಿನಲ್ಲಿ ಎಬಿವಿಪಿ ಬೆಂಬಲಿಗರಿಂದ ಫೆೆಲೆಸ್ತೀನ್ ಧ್ವಜ ಸುಟ್ಟು ಹಾಕಿ ಇಸ್ರೇಲ್ ಪರ ಘೋಷಣೆ
  • whatsapp icon

ಹೊಸದಿಲ್ಲಿ: ಇಸ್ರೇಲ್ ಪರವಾಗಿ ಘೋಷಣೆ ಕೂಗಿದ ಆರೋಪದಲ್ಲಿ ಜವಾಹರಲಾಲ್ ವಿವಿ (ಜೆಎನ್‌ಯು)ಯ ಅಖಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಸದಸ್ಯರು ಶನಿವಾರ ವಿವಿ ಆವರಣದಲ್ಲಿ ಫೆಲೆಸ್ತೀನ್ ಧ್ವಜವನ್ನು ಸುಟ್ಟುಹಾಕಿದ್ದು, ಇಸ್ರೇಲ್ ಪರ ಘೋಷಣೆಗಳನ್ನು ಕೂಗಿದ್ದಾರೆ.

ಎಬಿವಿಪಿ ಬೆಂಬಲಿಗ ವಿದ್ಯಾರ್ಥಿಗಳ ಗುಂಪೊಂದು ವಿದ್ಯಾರ್ಥಿಯೊಬ್ಬನಿಂದ ಧ್ಜಜವನ್ನು ಕಸಿದುಕೊಂಡು ಅದನ್ನು ಸುಡಲು ಮುಂದಾಗುತ್ತಿರುವ ದೃಶ್ಯವಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಲವಾರು ವಿದ್ಯಾರ್ಥಿ ಸಂಘಟನೆಗಳು ಎಬಿವಿಪಿಯ ಕೃತ್ಯವನ್ನು ಖಂಡಿಸಿದ್ದು, ಅದರ ವಿರುದ್ಧ ಕಠಿಣಕ್ರಮವನ್ನು ಕೈಗೊಳ್ಳಬೇಕೆಂದು ವಿವಿ ಆಡಳಿತವನ್ನು ಆಗ್ರಹಿಸಿವೆ.

ಬಹುತೇಕ ಮಹಿಳೆಯರು, ಮಕ್ಕಳು ಸೇರಿದಂತೆ 50 ಸಾವಿರಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರ ಹತ್ಯೆಗೆ ಕಾರಣವಾದ ಇಸ್ರೇಲ್ನ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸುವ ಹಾಗೂ ಫೆಲೆಸ್ತೀನ್ ಧ್ವಜವನ್ನು ಸುಟ್ಟುಹಾಕಿದ ಕ್ರಮವನ್ನು ‘ ದಿ ಫ್ರಾಟರ್ನಿಟಿ ಮೂವ್ಮೆಂಟ್’ ಎಂಬ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಈ ಕೃತ್ಯವು ಸಾವಿರಾರು ಫೆಲೆಸ್ತೀನಿಯರ ಹತ್ಯಾಕಾಂಡಕ್ಕೆ ಕಾರಣವಾ ಜನಾಂಗೀಯನರಹಂತಕ ಆಡಳಿತಕ್ಕೆ ಎಬಿವಿಪಿಯ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ. ಈ ಇಸ್ಲಾಮೋಫೊಬಿಕ್ (ಇಸ್ಲಾಂ ಕುರಿತ ಭಯಗ್ರಸ್ತ ಮಾನಸಿಕತೆ) ಹಾಗೂ ದ್ವೇಷಕಾರಿ ಕೃತ್ಯದ ಮೂಲಕ ಎಬಿವಿಪಿಯು ವಿವಿ ಕ್ಯಾಂಪಸ್ ನಲ್ಲಿ ಹಿಂಸಾಚಾರ ಹಾಗೂ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಯತ್ನಿಸುತ್ತದೆ.ಇಂತಹ ಕೃತ್ಯಗಳು ಶಾಂತಿ, ಸೌಹಾರ್ದ ಹಾಗೂ ಎಲ್ಲರ ಒಳಪಡಿಸುವಿಕೆಯ ಆಶಯದ ಮೇಲೆ ನಡೆದ ನೇರ ಆಕ್ರಮಣವಾಗಿದೆ ಎಂದು’’ ಎಂದು ಫ್ರಾಟರ್ನಿಟಿ ಮೂವ್ಮೆಂಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ದ್ವೇಷದಿಂದ ಲಾಭವನ್ನು ಪಡೆಯುವವರಿಂದ ಅಂಗೀಕಾರವನ್ನು ಪಡೆಯಲು ನಾವು ಬಯಸುವುದಿಲ್ಲ. ದಬ್ಬಾಳಿಕೆಯ ವಿರುದ್ಧ ಹೋರಾಡುವ ಜನತೆಯ ಧ್ವಜವನ್ನು ಸುಟ್ಟುಹಾಕುವುದರಿಂದ ನೀವು ಬಲಿಷ್ಠರೆನಿಸಿಕೊಳ್ಳಲಾರಿರಿ, ಇದು ಕೇವಲ ನಿಮ್ಮ ರಾಜಕೀಯ ಠೊಳ್ಳುತನವನ್ನು ಪ್ರದರ್ಶಿಸುತ್ತದೆ’’ ಎಂದು ಫ್ರಾಟರ್ನಿಟಿ ಮೂವ್ಮೆಂಟ್ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News