ನಾನು ಮಲಯಾಳಂ ಚಿತ್ರರಂಗದಲ್ಲಿ ಯಾವುದೇ ಪ್ರಬಲ ಗುಂಪಿನ ಭಾಗವಾಗಿಲ್ಲ: ನಟ ಮೋಹನ್ ಲಾಲ್‌

Update: 2024-08-31 11:27 GMT

ನಟ ಮೋಹನಲಾಲ್ 

ತಿರುವನಂತಪುರ: ‘ನಾನು ಮಲಯಾಳಂ ಚಿತ್ರರಂಗದಲ್ಲಿ ಯಾವುದೇ ಪ್ರಬಲ ಗುಂಪಿನ ಭಾಗವಾಗಿಲ್ಲ ಮತ್ತು ಇಂತಹ ಗುಂಪಿನ ಬಗ್ಗೆ ನನಗೆ ತಿಳಿದಿಲ್ಲ ’ ಎಂದು ಖ್ಯಾತ ಮಲಯಾಳಂ ನಟ ಮೋಹನಲಾಲ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮಾ)ದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಶನಿವಾರ ತನ್ನ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಹೇಮಾ ಸಮಿತಿಯ ವರದಿಯನ್ನು ಸರಕಾರವು ಬಿಡುಗಡೆಗೊಳಿಸಿರುವುದು ಉತ್ತಮ ನಿರ್ಧಾರವಾಗಿದೆ. ತಪ್ಪಿತಸ್ಥರ ವಿರುದ್ಧ ಪುರಾವೆಗಳಿದ್ದರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.

ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ವೃತ್ತಿಪರರಿಗೆ ಕಿರುಕುಳ ಮತ್ತು ಶೋಷಣೆ ಆರೋಪಗಳ ಮೇಲೆ ಬೆಳಕು ಚೆಲ್ಲಿರುವ ಹೇಮಾ ಸಮಿತಿ ವರದಿಯ ಬಿಡುಗಡೆಯು ಅಲ್ಲೋಲಕಲ್ಲೋಲವವನ್ನೇ ಸೃಷ್ಟಿಸಿದೆ. ಲೈಂಗಿಕ ದೌರ್ಜನ್ಯಗಳ ಆರೋಪಗಳಲ್ಲಿ ಚಿತ್ರರಂಗದ ಹಲವಾರು ಖ್ಯಾತನಾಮರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ.

ಮಲಯಾಳಂ ಚಿತ್ರರಂಗದಲ್ಲಿ ಮೀಟೂ ಆಂದೋಲನದ ಹೊಸ ಅಲೆಯ ನಡುವೆ ಮೋಹನಲಾಲ್ ವಾರದ ಆರಂಭದಲ್ಲಿ ಅಮ್ಮಾ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದರು ಮತ್ತು ಅವರ ಹೆಜ್ಜೆಯನ್ನೇ ಅನುಸರಿಸಿದ 17 ಸದಸ್ಯರ ಕಾರ್ಯಕಾರಿ ಸಮಿತಿಯೂ ರಾಜೀನಾಮೆ ಸಲ್ಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News