ಶಿಮ್ಲಾ ಮಸೀದಿ ವಿವಾದ | ಸಿಪಿಐಎಂ ನೇತೃತ್ವದಲ್ಲಿ ಸದ್ಭಾವನಾ ಮೆರವಣಿಗೆ

Update: 2024-09-27 14:30 GMT

PC : PTI 

ಶಿಮ್ಲಾ: ಶಿಮ್ಲಾದ ನೆರೆಯ ಪಟ್ಟಣವಾದ ಸಂಜೌಲಿಯಲ್ಲಿ ಮಸೀದಿಯೊಂದಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಸಿಪಿಐ(ಎಂ) ನೇತೃತ್ವದಲ್ಲಿ ಭಿತ್ತಿಚಿತ್ರ ಹಿಡಿದು ಶಾಂತಿ ಮೆರವಣಿಗೆ ನಡೆಸಿದರು.

ಶಿಮ್ಲಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡ ಸದ್ಭಾವನಾ ಮೆರವಣಿಗೆಯು ಲೋಯರ್ ಬಝಾರ್ ಮೂಲಕ ರಿಡ್ಜ್‌ವರೆಗೆ ತೆರಳಿತು. ನೆರೆದಿದ್ದ ಜನರು ರಿಡ್ಜ್ ಬಳಿಯಿರುವ ಮಹಾತ್ಮ ಗಾಂಧಿ ಪ್ರತಿಮೆಯೆದುರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಪ್ರತಿಜ್ಞೆ ಮಾಡಿದರು.

ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಸಿಪಿಐಎಂ ನಾಯಕ ರಾಕೇಶ್ ಸಿಂಗ್, ರಾಜ್ಯದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸಹೋದರತ್ವವನ್ನು ಕಾಪಾಡಲು ಜನರು ಮುಂದೆ ಬರಬೇಕು ಎಂದು ಮನವಿ ಮಾಡಿದರು.

"ಹಿಮಾಚಲ ಪ್ರದೇಶದ ಜನರು ಯಾವಾಗಲೂ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತತೆಯನ್ನು ಉಲ್ಲೇಖಿಸಲಾಗಿದ್ದು, ಎಲ್ಲ ಧರ್ಮದವರೂ ಸಮಾನತೆಯ ಹಕ್ಕು ಹೊಂದಿದ್ದಾರೆ" ಎಂದು ಅವರು ಹೇಳಿದರು.

ಈ ನಡುವೆ, ಹಿಂದೂ ಬಲಪಂಥೀಯ ಸಂಘಟನೆಯಾದ ದೇವಭೂಮಿ ಸಂಘರ್ಷ ಸಮಿತಿಯು ಸಂಜೌಲಿ ಮಸೀದಿಯನ್ನು ನೆಲಸಮಗೊಳಿಸಬೇಕು ಹಾಗೂ ಅಪರಿಚಿತ ವಲಸಿಗರ ಪರಿಶೀಲನೆ ನಡೆಯಬೇಕು ಎಂದು ಆಗ್ರಹಿಸಿ ಶನಿವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News