ಕೇರಳ | ಹಿರಿಯ ಕಾಂಗ್ರೆಸ್ ನಾಯಕ ಸೂರನಾಡ್ ರಾಜಶೇಖರನ್ ನಿಧನ

Update: 2025-04-11 11:17 IST
ಕೇರಳ | ಹಿರಿಯ ಕಾಂಗ್ರೆಸ್ ನಾಯಕ ಸೂರನಾಡ್ ರಾಜಶೇಖರನ್ ನಿಧನ

Photo | thehindu

  • whatsapp icon

ಕೊಚ್ಚಿ ; ಹಿರಿಯ ಕಾಂಗ್ರೆಸ್ ನಾಯಕ ಸೂರನಾಡ್ ರಾಜಶೇಖರನ್ ಶುಕ್ರವಾರ ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದ ರಾಜಶೇಖರನ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಾಲೇಜು ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ರಾಜಶೇಖರನ್ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಶೇಖರನ್ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

ರಾಜಶೇಖರನ್ ಅವರು ಪತ್ನಿ ಉದಯ ಮತ್ತು ಮಕ್ಕಳಾದ ಲಕ್ಷ್ಮಿ, ನಿಶಾಂತ್ ಮೆನನ್, ಅರುಣ್ ಗಣೇಶ್ ಮತ್ತು ದೇವಿ ಅವರನ್ನು ಅಗಲಿದ್ದಾರೆ. ಶುಕ್ರವಾರ ಸಂಜೆ ಕೊಲ್ಲಂ ಜಿಲ್ಲೆಯ ಚತ್ತನ್ನೂರಿನಲ್ಲಿರುವ ಸ್ವಗೃಹದಲ್ಲಿ ರಾಜಶೇಖರನ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News