ನಾಗ್ಪುರದಲ್ಲಿ ಜಮ್ಮುಕಾಶ್ಮೀರದ ವಿದ್ಯಾರ್ಥಿ ಮೇಲೆ ಹಲ್ಲೆ

Update: 2025-04-30 13:15 IST
ನಾಗ್ಪುರದಲ್ಲಿ ಜಮ್ಮುಕಾಶ್ಮೀರದ ವಿದ್ಯಾರ್ಥಿ ಮೇಲೆ ಹಲ್ಲೆ

Screengrab:X/@NasirKhuehami

  • whatsapp icon

ಮುಂಬೈ : ನಾಗ್ಪುರದ ಕ್ಯಾಂಪ್ಟೀ ಬಳಿ ಜಮ್ಮುಕಾಶ್ಮೀರ ಮೂಲದ ಅರೆ ವೈದ್ಯಕೀಯ ವಿದ್ಯಾರ್ಥಿಗೆ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಜಮ್ಮುಕಾಶ್ಮೀರದ ದೋಡಾದ ನಿವಾಸಿ ಮುಹಮ್ಮದ್ ವಸೀಮ್ ಹಲ್ಲೆಗೊಳಗಾದ ವಿದ್ಯಾರ್ಥಿ. ಮುಹಮ್ಮದ್ ವಸೀಮ್ ತನ್ನ ಸ್ನೇಹಿತ ಪಿಯೂಶ್ ಲಾಂಜೆ ಜೊತೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ರವಿವಾರ ಕ್ಯಾಂಪ್ಟೀ ಮಾರುಕಟ್ಟೆಯಿಂದ ಪುಸ್ತಕಗಳನ್ನು ಖರೀದಿಸಿಕೊಂಡು ವಸೀಮ್ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದಾಗ ಕೆಲವರು ಅವರನ್ನು ತಡೆದು ವಿಚಾರಿಸಿದ್ದರು. ಈ ವೇಳೆ ಸರಿಯಾಗಿ ಉತ್ತರಿಸಿಲ್ಲ ಎಂದು ವಸೀಮ್ ಮೇಲೆ ಹಲ್ಲೆ ನಡೆಸಲಾಗಿದೆ. ʼನಾವು ಕಾಲೇಜು ವಿದ್ಯಾರ್ಥಿಗಳುʼ ಎಂದು ಪಿಯೂಶ್ ಲಾಂಜೆ ಹೇಳಿದ ಬಳಿಕವಷ್ಟೇ ದುಷ್ಕರ್ಮಿಗಳು ಹಲ್ಲೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ವರದಿಯಾಗಿದೆ.

ನಾನು ಜಮ್ಮುಕಾಶ್ಮೀರದವನೆಂದು ತಿಳಿದ ಬಳಿಕ ನನ್ನ ಮೇಲೆ ಹಲ್ಲೆ ನಡೆಯಿತು ಎಂದು ವಸೀಮ್ ಹೇಳಿರುವ ಬಗ್ಗೆ ದಿ ಹಿಂದೂ ವರದಿ ಮಾಡಿದೆ. ʼಅವರು ನಮ್ಮ ಶರ್ಟ್ ಕಾಲರ್ ಹಿಡಿದು ಹಲ್ಲೆ ನಡೆಸಿದರು. ನಾವು ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆವುʼ ಎಂದು ವಸೀಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ʼಮಾರುಕಟ್ಟೆಯಿಂದ ವಾಪಾಸ್ಸು ಬರುವಾಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಕ್ಯಾಂಪ್ಟೀ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News