ಭಾರತದ ಮೊದಲ ಸೌರ ಬಾಹ್ಯಾಕಾಶ ಉಪಗ್ರಹದ ಯಶಸ್ವಿ ಉಡಾವಣೆ: ಸಹ ವಿಜ್ಞಾನಿಗಳು, ಭಾರತಕ್ಕೆ ಅಭಿನಂದನೆ ತಿಳಿಸಿದ ಇಸ್ರೋ
Update: 2023-09-02 08:19 GMT
ಹೊಸದಿಲ್ಲಿ: ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಪಿಎಸ್ ಎಲ್ ವಿ-ಸಿ 57 ರಾಕೆಟ್ ನಿಂದ ಯಶಸ್ವಿಯಾಗಿ ಬೇರ್ಪಡಿಸಿ ಭೂಮಿಯ ಸುತ್ತ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ ಕೆಲವೇ ನಿಮಿಷಗಳಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ್ ಯಶಸ್ವಿ ಉಡಾವಣೆಗಾಗಿ ತಮ್ಮ ಸಹ ವಿಜ್ಞಾನಿಗಳು ಹಾಗೂ ಭಾರತವನ್ನು ಅಭಿನಂದಿಸಿದ್ದಾರೆ.
ಪ್ರತ್ಯೇಕತೆಯನ್ನು ದೃಢಪಡಿಸಿದ ತಕ್ಷಣ ಇಸ್ರೋ ನಿರೂಪಕರೊಬ್ಬರು, "PSLV C-57 ಆದಿತ್ಯ-L1 ಮಿಷನ್ ಅನ್ನು ಸಾಧಿಸಲಾಗಿದೆ" ಎಂದು ಘೋಷಿಸಿದರು.