ಉಸ್ತಾದ್ ಝಾಕಿರ್ ಹುಸೈನ್ ಜೀವಂತವಾಗಿದ್ದಾರೆ: ಕುಟುಂಬಸ್ಥರ ಸ್ಪಷ್ಟನೆ

Update: 2024-12-15 19:12 GMT

ಝಾಕಿರ್ ಹುಸೈನ್ (PTI)

ಹೊಸದಿಲ್ಲಿ: ವಿಶ್ವಪ್ರಸಿದ್ಧ ತಬಲಾ ವಾದಕ ಝಾಕಿರ್ ಹುಸೈನ್ ರವಿವಾರ ನಿಧನರಾಗಿದ್ದಾರೆ ಎಂಬ ವರದಿ ಬೆನ್ನಲ್ಲೇ ಝಾಕಿರ್ ಅವರ ಸಹೋದರಿ ಖುರ್ಶಿದ್‌ ಔಲಿಯಾ ಸ್ಪಷ್ಟನೆ ನೀಡಿದ್ದು, ಅವರು ಇನ್ನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಝಾಕಿರ್ ಹುಸೈನ್ ನಿಧನ ಕುರಿತ ವರದಿಗೆ ಪ್ರತಿಕ್ರಿಯಿಸಿದ ಅವರು, “ ನನ್ನ ಸಹೋದರನ ಸ್ಥಿತಿ ಗಂಭೀರವಾಗಿದೆ. ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ” ಎಂದು ಖುರ್ಶಿದ್ ಹೇಳಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News