ರಮಝಾನ್‌ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೇ ತೆರಳಲು ಅನುಮತಿ ನೀಡಿದ ತೆಲಂಗಾಣ ಸರಕಾರ

Update: 2025-02-17 22:47 IST
ರಮಝಾನ್‌ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೇ ತೆರಳಲು ಅನುಮತಿ ನೀಡಿದ ತೆಲಂಗಾಣ ಸರಕಾರ

Photo | IANS

  • whatsapp icon

ಹೈದರಾಬಾದ್: ರಮಝಾನ್‌ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೆ ತೆರಳಲು ತೆಲಂಗಾಣ ಸರಕಾರ ಸೋಮವಾರ ಅನುಮತಿ ನೀಡಿದೆ.

ಚಂದ್ರ ದರ್ಶನದ ಆಧಾರದಲ್ಲಿ ಮಾರ್ಚ್ 1 ಅಥವಾ ಮಾರ್ಚ್ 2 ರಂದು ಪವಿತ್ರ ರಮಝಾನ್‌ ತಿಂಗಳು ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ತೆರಳಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಆದೇಶ ಹೊರಡಿಸಿದ್ದಾರೆ.

"ತುರ್ತು ಪರಿಸ್ಥಿತಿ ಹೊರತುಪಡಿಸಿ ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲಾ ಮುಸ್ಲಿಂ ಸರಕಾರಿ ನೌಕರರು ಅಥವಾ ಶಿಕ್ಷಕರು ಅಥವಾ ಗುತ್ತಿಗೆ – ಹೊರಗುತ್ತಿಗೆ ನೌಕರರು, ನಿಗಮ - ಮಂಡಳಿಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ನೌಕರರು ಪವಿತ್ರ ರಮಝಾನ್‌ ತಿಂಗಳಲ್ಲಿ, ಅಂದರೆ ಮಾರ್ಚ್ 2 ರಿಂದ 31ರವರೆಗೆ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಹೋಗಲು ಸರಕಾರ ಅನುಮತಿ ನೀಡಿದೆ," ಎಂದು ಸರಕಾರಿ ಆದೇಶ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News