ತೆಲಂಗಾಣ ಸುರಂಗ ಕುಸಿತ: ಕಾರ್ಮಿಕರ ಪತ್ತೆಗೆ ಮುಂದುವರಿದ ಶೋಧ ಕಾರ್ಯಾಚರಣೆ

Update: 2025-03-16 14:24 IST
ತೆಲಂಗಾಣ ಸುರಂಗ ಕುಸಿತ: ಕಾರ್ಮಿಕರ ಪತ್ತೆಗೆ ಮುಂದುವರಿದ ಶೋಧ ಕಾರ್ಯಾಚರಣೆ

Photo credit: PTI

  • whatsapp icon

ನಾಗರಕರ್ನೂಲ್: ಫೆಬ್ರವರಿ 22ರಂದು ಭಾಗಶಃ ಕುಸಿದು ಬಿದ್ದಿದ್ದ ಶ್ರೀಶೈಲಂ ಎಡ ದಂಡೆ ನಾಲೆಯ ಸುರಂಗದಲ್ಲಿ ಸಿಲುಕಿಕೊಂಡಿರುವ ಇನ್ನುಳಿದ ಏಳು ಮಂದಿ ಕಾರ್ಮಿಕರನ್ನು ಪತ್ತೆ ಹಚ್ಚುವ ಶೋಧ ಕಾರ್ಯಾಚರಣೆ ಚುರುಕುಗೊಂಡಿದ್ದು, ಅವರನ್ನು ಪತ್ತೆ ಹಚ್ಚಲು ರವಿವಾರ ಯಂತ್ರೋಪಕರಣಗಳು ಹಾಗೂ ರಕ್ಷಣಾ ತಂಡಗಳು ಸುರಂಗದೊಳಗೆ ತೆರಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಸುರಂಗದೊಳಗೆ ಬಿದ್ದಿರುವ ಮಣ್ಣಿನ ರಾಶಿಯನ್ನು ಹೊರ ತೆಗೆಯಲು ಸ್ವಾಯತ್ತ ಹೈಡ್ರಾಲಿಕ್ ಚಾಲಿತ ರೊಬಾಟ್ ಅನ್ನು ಬಳಸಲಾಗುತ್ತಿದ್ದು, ಅದರೊಂದಿಗೆ ಸುರಂಗದೊಳಗೆ ಬಿದ್ದಿರುವ ಮಣ್ಣು ಹಾಗೂ ಇನ್ನಿತರ ಅವಶೇಷಗಳನ್ನು ತ್ವರಿತವಾಗಿ ಹೊರ ತೆಗೆಯಲು ನೆರವು ನೀಡುವ 30 ಅಶ್ವಶಕ್ತಿ ಸಾಮರ್ಥ್ಯದ ಲಿಕ್ವಿಡ್ ರಿಂಗ್ ವ್ಯಾಕ್ಯೂಮ್ ಪಂಪ್ ಹಾಗೂ ವ್ಯಾಕ್ಯೂಮ್ ಟ್ಯಾಂಕ್ ಮೆಷಿನ್ ಅನ್ನು ಬಳಸಲಾಗುತ್ತಿದೆ ಎಂದು ಶನಿವಾರ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ವೇಯರ್ ಬೆಲ್ಟ್ ಅನ್ನು ಬಳಸಿಕೊಂಡು ಅಂದಾಜು 620 ಘನ ಮೀಟರ್ ಮಣ್ಣು ಹಾಗೂ ಕೆಸರನ್ನು ಸುರಂಗದಿಂದ ಹೊರ ತೆಗೆಯಬಹುದಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಮನುಷ್ಯರ ಶವಗಳನ್ನು ಪತ್ತೆ ಹಚ್ಚುವ ಶ್ವಾನ ದಳ, ಸರಕಾರಿ ಒಡೆತನದ ಸಿಂಗರೇಣಿ ಕಲ್ಲಿದ್ದಲು ಗಣಿ ಸಂಸ್ಥೆ, ಹೈದರಾಬಾದ್ ಮೂಲದ ರೊಬೊಟಿಕ್ ಕಂಪನಿ ಹಾಗೂ ಇನ್ನಿತರ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News