ಮಧ್ಯಪ್ರದೇಶ | ಹಣ ದೋಚುವ ಮುನ್ನ ದೇವರ ಆಶೀರ್ವಾದ ಪಡೆದ ಕಳ್ಳ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Update: 2024-12-08 10:53 GMT

Screengrab from the video | X

ಭೋಪಾಲ್: ದೇವರ ಆಶೀರ್ವಾದ ಪಡೆದು ಕಳ್ಳನೋರ್ವ 1.6 ಲಕ್ಷ ರೂ. ನಗದು ಕಳ್ಳತನ ಮಾಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ರಾಜ್ ಗಢದ ಜೀರಾಪುರ-ಮಚಲ್ಪುರ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ನಡೆದಿದ್ದು, ಈ ಕುರಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶನಿವಾರ ಮುಂಜಾನೆ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕಳ್ಳನ ಚಲನವಲನಗಳು ಪೆಟ್ರೋಲ್ ಪಂಪ್ ನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳತನಕ್ಕೆ ಮೊದಲು ಕಚೇರಿಯಲ್ಲಿದ್ದ ದೇವರ ಪೋಟೋಗೆ ಕಳ್ಳ ನಮಸ್ಕರಿಸುತ್ತಿರುವುದು, ಪೂಜಿಸುತ್ತಿರುವುದು ಕಂಡು ಬಂದಿದೆ. ಆ ಬಳಿಕ ಕಚೇರಿಯ ಡ್ರವರ್ ತೆರೆದು ಹಣವನ್ನು ದೋಚಿದ್ದಾನೆ. ಕಳ್ಳತನದ ಬಳಿಕ ಸ್ಥಳದಿಂದ ಹೊರಡುವ ಮುನ್ನ ಆತ ಮತ್ತೆ ದೇವರಿಗೆ ನಮಸ್ಕರಿಸಿದ್ದಾನೆ.

ಮಾಚಲ್ ಪುರ ಪೊಲೀಸ್ ಠಾಣೆಯ ಪ್ರಭಾರಿ ಜಿತೇಂದ್ರ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪೆಟ್ರೋಲ್ ಬಂಕ್ ನಲ್ಲಿ 1.57 ಲಕ್ಷ ರೂ. ಕಳ್ಳತನ ನಡೆದಿದೆ. ಕಳ್ಳತನ ಮಾಡುವ ಮೊದಲು ಕಳ್ಳ ದೇವರಿಗೆ ನಮಸ್ಕರಿಸುವುದನ್ನು ಸಿಸಿಟಿವಿ ದೃಶ್ಯಗಳು ತೋರಿಸುತ್ತದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News