ಭಾರತೀಯ ವಲಸಿಗರನ್ನು ಭಾರತಕ್ಕೆ ವಾಪಾಸು ಕಳುಹಿಸಿದ ಟ್ರಂಪ್ ಆಡಳಿತ

Update: 2025-02-04 08:07 IST
Trump

ಡೊನಾಲ್ಡ್ ಟ್ರಂಪ್ | PTI 

  • whatsapp icon

ವಾಷಿಂಗ್ಟನ್: ಅಕ್ರಮ ಭಾರತೀಯ ವಲಸೆಗಾರರನ್ನು ಹೊತ್ತಿದ್ದ ಅಮೆರಿಕದ ಮಿಲಿಟರಿ ವಿಮಾನ ಭಾರತಕ್ಕೆ ತೆರಳಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಅಕ್ರಮ ವಲಸೆಗಾರರನ್ನು ಹೊಂದಿದ್ದ ಸಿ-17 ವಿಮಾನ 24 ಗಂಟೆಯವರೆಗೆ ಬರುವ ಸಾಧ್ಯತೆ ಇಲ್ಲ ಎಂದು ವಿವರಿಸಿದೆ.

ವಲಸೆಗಾರರ ಕಾರ್ಯಸೂಚಿಯ ವಿಚಾರದಲ್ಲಿ ಟ್ರಂಪ್ ಆಡಳಿತ ಅಮೆರಿಕದ ಸೇನೆಯ ನೆರವು ಪಡೆದಿದ್ದು, ಅಮೆರಿಕ- ಮೆಕ್ಸಿಕೊ ಗಡಿಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ಜತೆಗೆ ವಲಸೆಗಾರರನ್ನು ಗಡೀಪಾರು ಮಾಡಲು ಮತ್ತು ಅವರನ್ನು ಇಟ್ಟುಕೊಳ್ಳಲು ಸೇನಾ ನೆಲೆಗಳನ್ನು ತೆರೆಯುತ್ತಿದೆ.

ಅಕ್ರಮ ವಲಸಿಗರು ಎನಿಸಿದವರನ್ನು ವಿಮಾನದಲ್ಲಿ ಗ್ವಾಟೆಮಾಲಾ, ಪೆರು ಮತ್ತು ಹೌಂಡರಸ್ಗೆ ಕಳುಹಿಸಲಾಗಿದೆ. ಇದೀಗ ಟ್ರಂಪ್ ಆಡಳಿತ ಅಧಿಕಾರಕ್ಕೆ ಮರಳಿದ ಬಳಿಕ ಭಾರತಕ್ಕೆ ಕೂಡಾ ಅಕ್ರಮ ವಲಸೆಗಾರರನ್ನು ವಾಪಾಸು ಕಳುಹಿಸಲಾಗುತ್ತಿದೆ.

ಟ್ರಂಪ್ ಶ್ವೇತಭವನಕ್ಕೆ ಮರಳಿದ ಬಳಿಕ ಇದೇಮೊದಲ ಬಾರಿಗೆ ಭಾರತಕ್ಕೆ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ. ಟ್ರಂಪ್ ಹಾಗೂ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜತೆಗಿನ ಮಾತುಕತೆ ವೇಳೆ ಭಾರತೀಯ ಅಕ್ರಮ ವಲಸಿಗರ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News