ಉತ್ತರಪ್ರದೇಶ | ಎಡಗಾಲು ಮುರಿತಕ್ಕೊಳಗಾಗಿದ್ದ ಮಹಿಳೆಗೆ ಬಲಗಾಲಿಗೆ ಶಸ್ತ್ರಕ್ರಿಯೆ ನಡೆಸಿದ ವೈದ್ಯ

Update: 2024-12-30 17:34 GMT

ಲಕ್ನೋ: ಉತ್ತರಪ್ರದೇಶದ ಸುಲ್ತಾನ್ ಪುರದಲ್ಲಿ ಎಡಗಾಲು ಮುರಿತಕ್ಕೊಳಗಾಗಿದ್ದ ಮಹಿಳೆಯೋರ್ವರಿಗೆ ಬಲಗಾಲಿಗೆ ಶಸ್ತ್ರಕ್ರಿಯೆ ನಡೆಸಿ ವೈದ್ಯರು ಎಡವಟ್ಟು ಮಾಡಿರುವ ಘಟನೆ ನಡೆದಿದೆ.

ಕನ್ಹೈ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆ ಭುಯಿಲಾ ದೇವಿ ಅವರ ಎಡಗಾಲಿಗೆ ಗಾಯವಾಗಿತ್ತು. ಎಕ್ಸ್ ರೇಯಲ್ಲಿ ಮೂಳೆ ಮುರಿತವಾಗಿರುವುದು ಬಹಿರಂಗವಾಗಿ ಆಕೆಯನ್ನು ಚಿಕಿತ್ಸೆಗಾಗಿ ಸುಲ್ತಾನ್ ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.

ʼಅವರಿಗೆ ಎಡಗಾಲಿನ ಮೂಳೆ ಮುರಿತವಾಗಿತ್ತು. ಆದರೆ  ವೈದ್ಯರು ಬಲಗಾಲಿಗೆ ಶಸ್ತ್ರಕ್ರಿಯೆ ನಡೆಸಿ ಎಡವಟ್ಟು ಮಾಡಿದ್ದಾರೆʼ ಎಂದು ಮಹಿಳೆಯ ಕುಟುಂಬವು ಆರೋಪಿಸಿದೆ. 

ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಾದ ಡಾ.ಪಿ.ಕೆ ಪಾಂಡೆ ಆಪರೇಷನ್ ನಂತರ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯ ನಿರ್ದೇಶಕ ಡಾ.ಅಶುತೋಷ್ ಶ್ರೀವಾಸ್ತವ ಅವರು ಮಾತನಾಡಿ, ಈ ಕುರಿತ ಆರೋಪವನ್ನು ಅಲ್ಲಗಳೆದಿದ್ದಾರೆ. ಎಡಗಾಲು ಮುರಿತಕ್ಕೊಳಗಾಗಿದೆ, ಅದನ್ನು ಆಪರೇಷನ್ ಮಾಡಲಾಗಿದೆ ಮತ್ತು ಬಲಗಾಲಿನಲ್ಲಿ ಸ್ವಲ್ಪ ಊತವಿತ್ತು ಅದನ್ನು ತೆಗೆದುಹಾಕಲಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News