ವಿಕಿಪೀಡಿಯಾ Vs ಎಎನ್ಐ ಪ್ರಕರಣ | ನ್ಯಾಯಾಧೀಶರಿಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಿಷಯಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ

Update: 2025-04-10 22:27 IST
ವಿಕಿಪೀಡಿಯಾ Vs ಎಎನ್ಐ ಪ್ರಕರಣ | ನ್ಯಾಯಾಧೀಶರಿಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಿಷಯಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ

Credit: wikipedia.org, aninews.in

  • whatsapp icon

ಹೊಸ ದಿಲ್ಲಿ: ನ್ಯಾಯಾಧೀಶರೊಬ್ಬರು ತಮಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಿಷಯವೊಂದನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ಏಶ್ಯನ್ ನ್ಯೂಸ್ ಇಂಟರ್ ನ್ಯಾಶನಲ್ Vs ವಿಕಿಪೀಡಿಯಾ ಫೌಂಡೇಶನ್’ ಶೀರ್ಷಿಕೆಯ ಪುಟವನ್ನು ತೆಗೆದು ಹಾಕಬೇಕು ಎಂದು ನಿರ್ದೇಶಿಸಿ ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ವಿಕಿಮೀಡಿಯಾ ಫೌಂಡೇಶನ್ ಸಲ್ಲಿಸಿದ್ದ ಮೇಲ್ಮನವಿಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

“ಯಾವುದಾದರೂ ಒಂದು ವಿಷಯವನ್ನು ತೆಗೆದು ಹಾಕಬೇಕು ಎಂದು ನಿರ್ದೇಶನ ನೀಡಲಾರದಷ್ಟು ನ್ಯಾಯಾಲಯ ಅಧಿಕಾರ ರಹಿತ ಎಂದು ನಾವು ಹೇಳುತ್ತಿಲ್ಲ. ಆದರೆ, ಪ್ರಕಟವಾಗಿರುವ ವಿಷಯವು ಅವಹೇಳನಕಾರಿಯಾಗಿರುವುದು ಪತ್ತೆಯಾಗಿದೆ ಎಂಬುದು ಮೊದಲಿಗೆ ಮೇಲ್ನೋಟಕ್ಕೆ ಕಂಡು ಬರಬೇಕಿದೆ. ಇದರರ್ಥ, ಯಾವುದೇ ವಿಷಯ ನಿಂದನಾತ್ಮಕವಾಗಿದೆ ಎಂಬ ಕಾರಣಗಳನ್ನು ಮೇಲ್ನೋಟದ ಶೋಧಗಳು ಒದಗಿಸಬೇಕು ಎಂಬುದು ಪೂರ್ವ ಶರತ್ತಾಗಿದೆ” ನ್ಯಾ. ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

ವಿಕಿಮೀಡಿಯಾ ಫೌಂಡೇಶನ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ವಿಕಿಪೀಡಿಯಾ ಪುಟದಲ್ಲಿದ್ದ ಮಾಹಿತಿಯು ಅದರ ವೇದಿಕೆಯ ಸ್ವಂತದ್ದಲ್ಲ, ಬದಲಿಗೆ, ಇನ್ನಿತರ ಮಾಧ್ಯಮ ಸಂಸ್ಥೆಗಳಿಂದ ಪೂರೈಸಲಾಗಿದ್ದ ಮಾಹಿತಿ ಎಂದು ವಾದಿಸಿದರು.

“ಈ ಕುರಿತು ಚರ್ಚೆ ನಡೆಯಬಾರದು ಎಂದಿಲ್ಲ. ನಮ್ಮಲ್ಲಿ ಮುಕ್ತ ನ್ಯಾಯ ವ್ಯವಸ್ಥೆಯಿದೆ. ಆದರೆ, ಇದರಿಂದ ಉತ್ಸಾಹ ಕುಗ್ಗಿಸುವ ಪರಿಣಾಮವುಂಟಾಗಲಿದೆ” ಎಂದೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಯಾವುದೇ ವಿಷಯವನ್ನು ತೆಗೆದು ಹಾಕಲು ಅದರಲ್ಲಿ ಆಕ್ಷೇಪಾರ್ಹ ಸಂಗತಿ ಕಂಡು ಬಂದಿದೆ ಎಂಬುದೊಂದೇ ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಕೂಡಾ ಅಭಿಪ್ರಾಯ ಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News