“ಮೋದೀಜಿ ಈ ವಿಚಾರದಲ್ಲಿ ಮೌನ ತಾಳುವರೇ?”: ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಕುರಿತು ಪ್ರಿಯಾಂಕಾ ಗಾಂಧಿ ಟೀಕೆ

Update: 2024-04-29 16:34 IST
“ಮೋದೀಜಿ ಈ ವಿಚಾರದಲ್ಲಿ ಮೌನ ತಾಳುವರೇ?”: ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಕುರಿತು ಪ್ರಿಯಾಂಕಾ ಗಾಂಧಿ ಟೀಕೆ

ಪ್ರಿಯಾಂಕಾ ಗಾಂಧಿ (PTI)

  • whatsapp icon

ಹೊಸದಿಲ್ಲಿ: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಮೌನವಾಗಿರುವರೇ ಎಂದು ಪ್ರಶ್ನಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರನ್ನೊಳಗೊಂಡ ಅಶ್ಲೀಲ ವೀಡಿಯೋಗಳು ತುಂಬಿರುವ ಪೆನ್‌ ಡ್ರೈವ್‌ ಕುರಿತು ಉಲ್ಲೇಖಿಸಿ ಬಿಜೆಪಿ ನಾಯಕರೊಬ್ಬರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿರುವ ಹೊರತಾಗಿಯೂ ಪಕ್ಷವು ಜೆಡಿ(ಎಸ್)‌ ಜೊತೆಗೆ ಮೈತ್ರಿ ಏಕೆ ಸಾಧಿಸಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

“ಪ್ರಧಾನಿ ತಮ್ಮ ಕೈಗಳನ್ನು ಯಾವ ನಾಯಕನ ಹೆಗಲಿನಲ್ಲಿರಿಸಿದ್ದರೋ, ಪ್ರಧಾನಿ ಯಾವ ನಾಯಕನಿಗಾಗಿ ಹತ್ತು ದಿನಗಳ ಹಿಂದೆ ಸ್ವತಃ ಪ್ರಚಾರ ನಡೆಸಿ, ವೇದಿಕೆಯಲ್ಲಿ ಪ್ರಶಂಸಿದ್ದರೋ ಇಂದು ಆ ನಾಯಕ ದೇಶದಿಂದ ಪರಾರಿಯಾಗಿದ್ದಾರೆ,” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಈ ಪೈಶಾಶಿಕ ಅಪರಾಧದ ಬಗ್ಗೆ ತಿಳಿದು ಕರುಳು ಹಿಂಡಿ ಬರುತ್ತಿದೆ. ನೂರಾರು ಮಹಿಳೆಯರ ಜೀವನ ಹಾಳಾಗಿದೆ. ಮೋದೀ ಜಿ ನೀವು ಮೌನ ತಾಳುವಿರಾ?,” ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News