ಕಸದ ಕೇಂದ್ರವಾದ ಸಕಲೇಶಪುರದ ಸುಭಾಷ್ ಮೈದಾನ

ಸಕಲೇಶಪುರ : ಒಂದು ಕಾಲದಲ್ಲಿ ಸಕಲೇಶಪುರ ಪಟ್ಟಣದ ವೈಭವದ ಲಾಂಛನವಾಗಿದ್ದ ಸುಭಾಷ್ ಮೈದಾನ ಇಂದು ಗಬ್ಬು ನಾರುವ ಕಸದ ಕೇಂದ್ರವಾಗಿದೆ.
ಸಕಲೇಶಪುರ ಸ್ವಾಮಿ ರಥೋತ್ಸವ ಅಂಗವಾಗಿ ಸುಭಾಷ್ ಮೈದಾನದಲ್ಲಿ ನಡೆಯುತ್ತಿದ್ದ, ವಸ್ತು ಪ್ರದರ್ಶನದಲ್ಲಿ ಅದ್ಭುತವಾದ ಆಕರ್ಷಣೆಯ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದವು. ಇಂದು ಈ ಸ್ಥಳ ಕಾಲು ಇಡಲು ಸಾಧ್ಯವಿಲ್ಲದಂತಹ ಗಬ್ಬು ನಾರುವ ಸ್ಥಳವಾಗಿ ಪರಿವರ್ತನೆಯಾಗಿದೆ.
ಸಕಲೇಶ್ವರ ಸ್ವಾಮಿ ತೇರಿನ ಎರಡು ದಿನ ಮೊದಲೇ ಸುಭಾಷ್ ಮೈದಾನವನ್ನು ಸಿಂಗರಿಸಲಾಗುತ್ತಿತು. ಈ ಸ್ಥಳದಲ್ಲಿ ನಾಟಕಗಳು, ಸಂಗೀತ ಕಾರ್ಯಕ್ರಮಗಳು, ವಿವಿಧ ಪ್ರದರ್ಶನಗಳು, ಕಬ್ಬಡಿ ಕ್ರೀಡೆ ಸೇರಿದಂತೆ ಅನೇಕ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದವು.ಇಂತಹ ಸ್ಥಳದಲ್ಲಿ ಕಸ ಸುರಿಯಲಾಗಿದೆ. ಮೈದಾನದಲ್ಲಿ ಟನ್‌ಗಳಷ್ಟು ಸಂಗ್ರಹವಾಗಿದೆ. ಈ ಪ್ರದೇಶದ ಸುತ್ತಮುತ್ತ ಅನೇಕ ವರ್ಷಗಳಿಂದ ಗ್ಯಾರೇಜ್‌ಗಳನ್ನು ನಿರ್ಮಿಸಿಕೊಂಡು ಅನೇಕ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಸದ ಸಂಗ್ರಹಣೆಯಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿತುವುದು ನಿಜಕ್ಕೂ ಶೋಚನೀಯ.
ಈ ಪ್ರದೇಶದ ಕ್ರೀಡಾಂಗಣವನ್ನು ಹೊಂದಿಕೊಂಡಿದೆ. ದಿನನಿತ್ಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕ್ರೀಡಾ ಅಭ್ಯಾಸ ಮಾಡುತ್ತಾರೆ. ಇವರ ಆರೋಗ್ಯದ ಮೇಲೆ ಕಸದ ವಾಸನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಸಕಲೇಶಪುರ ಪುರಸಭೆಗೆ ಈ ಕಸದ ಸಮಸ್ಯೆ ಪರಿಹರಿಸುವಂತೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಸದ ಸಮಸ್ಯೆಯೇ ಇಲ್ಲ ಎನ್ನುವಂತೆ ಪರಸಭೆ ಸದಸ್ಯರು ವರ್ತಿಸುತ್ತಾರೆ. ಕೆಲವೊಮ್ಮೆ ಕಸವನ್ನು ಹೇಮಾವತಿ ನದಿಗೆ ತಂದು ಸುರಿದು ಮತ್ತೊಂದು ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ.
ಕೇತ್ರದ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಪುರಸಭೆ ಅಧ್ಯಕ್ಷೆ ಜ್ಯೋತಿಯವರು ಸುಭಾಷ್ ಮೈದಾನದಲ್ಲಿರುವ ಕಸದ ರಾಶಿಯ ಸಮಸ್ಯೆಯನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಸಕಲೇಶಪುರದ ಬಗ್ಗೆ ಹೊರ ಊರಿನವರಿಗೆ ವಿಭಿನ್ನವಾದ ಕಲ್ಪನೆ ಇದೆ. ಸೌಂದರ್ಯಕ್ಕೆ ಸ್ವಚ್ಛತೆಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ನಂಬಿದ್ದಾರೆ, ಇವರ ಒಳಗಿನ ವಾಸ್ತವವೇ ಬೇರೆ. ಊರು ನಗರದಲ್ಲಿ ಕಸದ ಸಮಸ್ಯೆಯ ಬಗ್ಗೆ ಇಲ್ಲಿಯ ಜನಪ್ರತಿನಿಧಿಗಳಿಗೆ ಅರಿವೇ ಇಲ್ಲ, ಇದನ್ನು ಪ್ರಶ್ನಿಸಿದರೆ ಅದಕ್ಕೊಂದು ಆರೋಪ ಮಾಡಿ, ಬಾಯಿ ಮುಚ್ಚಿಸು ತ್ತಾರೆ. ಪುರಸಭೆಯ ಮನಸ್ಥಿತಿ ಹೇಗಿದೆ ಎಂಬವುದನ್ನು ಈ ಕಸದ ಸಮಸ್ಯೆಯನ್ನು ನೋಡಿ ಅರ್ಥಮಾಡಿಕೊಳ್ಳಬಹುದು.
-ಜಾನೆಕೆರೆ ಸಾಗರ್, ರಾಜ್ಯಾಧ್ಯಕ್ಷ, ಮಲೆನಾಡು ರಕ್ಷಣಾ ವೇದಿಕೆ, ಸಕಲೇಶಪುರ
ನಾವು ಎಂತಹ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದೇವೆ ಎಂದರೆ ಇದನ್ನು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಇಡೀ ತಾಲೂಕಿನಲ್ಲಿ ಅತ್ಯಂತ ಕೊಳಕು ಪರಿಸ್ಥಿತಿಯಲ್ಲಿ ಜೀವಿಸುತ್ತಿರುವ ಮನುಷ್ಯರು ಎಂದರೆ ಅದು ನಾವೇ. ಈ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. ಈ ಪರಿಸರದಲ್ಲಿ ಬದುಕುವುದು ಎಂದರೆ ನಮಗೆ ಹೆಮ್ಮೆಯಾಗುತ್ತಿತ್ತು. ಈಗ ನಾವು ಆರ್ಥಿಕವಾಗಿ ಸೋತು ಹೋಗಿದ್ದೇವೆ. ಜನ ಯಾರು ಇಲ್ಲಿಗೆ ಬರುವುದಿಲ್ಲ. ಆರೋಗ್ಯ ಕೆಡುತ್ತಿದೆ. ಇದಕ್ಕೆಲ್ಲ ನಾವು ಆಯ್ಕೆಮಾಡಿರು ರಾಜಕಾರಣಿಗಳು ಕಾರಣ.
-ಮುನ್ನ, ಗ್ಯಾರೇಜ್ ಕಾರ್ಮಿಕ