ಪಾರ್ಸೆಲ್ ಸಾಗಾಟ ಸೇವೆ: 20 ಟ್ರಕ್‌ಗಳ ಖರೀದಿ ಮಾಡಿದ KSRTC
Update: 2023-11-15 17:24 GMT
ಬೆಂಗಳೂರು: ವಿವಿಧ ಮಾರ್ಗಗಳ ಮೂಲಕ ಆದಾಯ ಹೆಚ್ಚಿಸಿ ಕೊಳ್ಳಲು ಮುಂದಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 20 ಲಾರಿ ಟ್ರಕ್‌ಗಳನ್ನು ಖರೀದಿಸಿದೆ. ಇನ್ನು ನಾಲ್ಕು ವರ್ಷಗಳಲ್ಲಿ 4,000 ಬಸ್‌ಗಳಲ್ಲಿ ಪಾರ್ಸೆಲ್ ಸಾಗಾಟ ಮಾಡುವ ಸೇವೆಯನ್ನು ವಿಸ್ತರಿಸುವ ಗುರಿಯನ್ನು ನಿಗಮ ಹೊಂದಿದೆ.
ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ , ತಲುಪಿಸಬೇಕಾದ ಸ್ಥಳಕ್ಕೆ ನಮ್ಮ ಟ್ರಕ್‌ಗಳು ಪಾರ್ಸೆಲ್ ಒಯ್ಯಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಆಕರ್ಷಕ ವಿನ್ಯಾಸದ, ಉತ್ತಮ ಗುಣಮಟ್ಟದ ಟ್ರಕ್‌ಗಳನ್ನು ಆರಿಸಲಾಗಿದೆ. ಮುಂದಿನ ತಿಂಗಳು ಡಿಸೆಂಬರ್ 15ರ ಒಳಗೆ 20 ಟ್ರಕ್‌ಗಳು ಪಾರ್ಸೆಲ್ ಸೇವೆ ಒದಗಿಸುವ ಕುರಿತು ಕೆಎಸ್ಸಾರ್ಟಿಸಿ ವಿಶ್ವಾಸವನ್ನು ವ್ಯಕ್ತಪಡಿಸಿದೆ.