ಲಿಂಗಸೂಗೂರು | ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Update: 2025-02-06 13:49 IST
ಲಿಂಗಸೂಗೂರು | ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
  • whatsapp icon

ರಾಯಚೂರು: ತಾಂತ್ರಿಕ ದೋಷದಿಂದಾಗಿ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಹೊರವಲಯ ಕರಿಗಾರ ಹೊಲದ ಹತ್ತಿರ ಇಂದು ನಡೆದಿದೆ.

ಮುದಗಲ್ ನ ಚಿಕ್ಕ ಲಕ್ಕಿಹಾಳದಿಂದ ಲಿಂಗಸುಗೂರು ಕಡೆ ಹೊರಟ ಬಸ್ ಮುದಗಲ್- ಲಿಂಗಸುಗೂರು ರಸ್ತೆಯಲ್ಲಿ ಕರಿಗಾರ ಹೊಲದ ಹತ್ತಿರ ಬಂದ ವೇಳೆ ಬಸ್ ನ ಎಕ್ಸ.ಎಲ್ ತುಂಡಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.

 

ಬಸ್ಸಿನಲ್ಲಿ 33 ಸ್ತ್ರೀಯರು, 6 ಜನ ಪುರುಷರು, 30 ವಿದ್ಯಾರ್ಥಿಗಳು ಸಂಚರಿಸುತ್ತಿದ್ದರು. ಕೆಲವರಿಗೆ ಸಣ್ಣ ಪುಟ್ಟ ಗಾಯಗಾಳಗಿವೆ. ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಲಿಂಗಸೂಗೂರು ಮಾರ್ಗವಾಗಿ ಸಂಚರಿಸುವ ಅನೇಕ ಸರ್ಕಾರಿ ಬಸ್ ಗಳು ಹಳೆಯದ್ದಾಗಿದ್ದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News