ಸಿರವಾರ: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ
Update: 2025-04-26 19:12 IST

ಸಿರವಾರ: ಪಟ್ಟಣದ ಮುಸ್ಲಿಮರು ಶುಕ್ರವಾರ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟಿಸಿದರು. ಈ ವೇಳೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿಯನ್ನು ಬೆಳಗಿಸಿ ಸಂತಾಪ ಸೂಚಿಸಲಾಯಿತು.
ನೂರಾನಿ ಮಸೀದಿ ಕಮೀಟಿಯ ಅಧ್ಯಕ್ಷ ಮಹ್ಮದ ವಲಿ ಗುತ್ತೇದಾರ ಮಾತನಾಡಿ, ಪಾಕಿಸ್ತಾನಿ ಉಗ್ರರ ಈ ನಡೆ ಖಂಡನೀಯ, ಭಾರತೀಯರೇನು ಅಸಮರ್ಥರಲ್ಲ, ಭಾರತೀಯ ಸೇನೆ ಏಟಿಗೆ ಎದುರೇಟು ನೀಡಿಯೇ ತೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಇಬ್ರಾಹಿಮ್ ಎಲ್ ಐ ಸಿ,ಅಜ್ಮೀರ್, ರಾಜ ಬಗರಿ, ಝಹೀರ್, ಸದ್ದಾಮ್ ಜಂಗಿ, ರಿಯಾಜ್ ಕಲ್ಲೂರ್, ಜೆ ಇ ಫಕ್ರುಸಾಬ್, ನದೀಮ್, ರಾಜ ಆಟೋ, ಮಹಮ್ಮದ್ ರಫಿ, ಮುಸ್ತಫಾ ಗಲಗ, ಅಡವಿ ರಾಜ ಸೇರಿದಂತೆ ಇತರರು ಇದ್ದರು.