ರಾಯಚೂರು | ವಿವಾಹ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಹಂಚಿದ ಯುವಕ
ರಾಯಚೂರು : ರಾಯಚೂರಿನ ಯುವಕನೊಬ್ಬ ತನ್ನ ಮದುವೆ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಹಂಚಿ ಗಮನ ಸೆಳೆದಿದ್ದಾರೆ.
ಇಬ್ರಾಹಿಂ ವಲಿ ಎಂಬ ಯುವಕ ಇಂದು ನಗರದ ಸಂಗಮ್ ಪ್ಯಾಲೇಸ್ ಫಂಕ್ಷನ್ ಹಾಲ್ ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಆಹ್ವಾನಿತರಿಗೆ ಸಂವಿಧಾನ ಪೀಠಿಕೆ ವಿತರಿಸಿದ್ದಾರೆ.
ಇಬ್ರಾಹಿಂ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಕೈಯಲ್ಲಿ ಸಂವಿಧಾನದ ಹಿಡಿದು ಪ್ರಚಾರ ಮಾಡುತ್ತಿದ್ದನ್ನು ಟಿವಿ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಿದ್ದರು. ಈ ಕುರಿತು ಸುತ್ತಮುತ್ತಲಿನ ಪ್ರಗತಿಪರರನ್ನು ಹಾಗೂ ಹೋರಾಟಗಾರರ ಬಳಿ ಮಾಹಿತಿ ತಿಳಿದುಕೊಂಡು ಸಂವಿಧಾನದ ಪ್ರಸ್ತಾವನೆಯಲ್ಲಿನ ವಿಷಯವನ್ನು ಗೆಳೆಯರೊಂದಿಗೆ ಚರ್ಚಿಸಿ ತನ್ನ ಮದುವೆಯಲ್ಲಿ ಸಂವಿಧಾನದ ಪೀಠಿಕೆ ಹಂಚಿದ್ದಾರೆ.
ಇಬ್ರಾಂಹಿರ ಈ ನಿರ್ಧಾರದಿಂದ ಸಂತಸರಾದ ಕೆಲ ಗೆಳೆಯರು ಅವರಿಗೆ ದೊಡ್ಡದಾದ ಸಂವಿಧಾನದ ಪ್ರಸ್ತಾವನೆಯ ಫೋಟೋ ಫ್ರೇಮ್ ನೀಡಿದ್ದಾರೆ.