ರಾಯಚೂರು | ಕರ್ತವ್ಯಲೋಪ, ನಿರಂತರ ಗೈರು ಆರೋಪ : ಓಪೆಕ್ ಆಸ್ಪತ್ರೆಯ ಡಾ.ವಿಶ್ವನಾಥ ರೆಡ್ಡಿ ಅಮಾನತು
Update: 2025-04-07 18:35 IST
ರಾಯಚೂರು : ಕರ್ತವ್ಯ ಲೋಪ, ನಿರಂತರ ಗೈರಾಗುತ್ತಿದ್ದ ಇಲ್ಲಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಹಾಗೂ ರಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ ರೆಡ್ಡಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಆಡಳಿತ ಮಂಡಳಿ ಉಪಾಧ್ಯಕ್ಷ ಮುಹಮ್ಮದ್ ಮೊಹಸೀನ್ ಅದೇಶಿಸಿದ್ದಾರೆ. ಸೇವೆಗೆ ಸಮರ್ಪಕವಾಗಿ ಹಾಜರಾಗದೆ ಇರುವ ಅರೋಪದ ಮೇಲೆ ಅಮಾನತ್ ಗೊಳಿಸಲಾಗಿದೆ.
ರಾಜೀವ್ ಗಾಂಧಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರೊಲೊಜಿ ವಿಭಾಗ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯಲ್ಲಿದ್ದ ಡಾ.ವಿಶ್ವನಾಥರೆಡ್ಡಿ ಅವರು ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಹಾಜರಿರದೇ ತಮ್ಮ ಖಾಸಗಿ ಪ್ರಯೋಗಾಲಯ ಕ್ಲಾರಿಟಿ ಸೆಂಟರ್ ನಲ್ಲಿ ಹೆಚ್ಚಿನ ಸಮಯ ಇರುತ್ತಿದ್ದರು ಎನ್ನಲಾಗಿದೆ.
ಸೇವೆಗೆ ನಿರಂತರ ಗೈರು ಹಾಗೂ ಬಯೋ ಮೆಟ್ರಿಕ್ ನಾಲ್ಲಿ ಹಾಜರಿ ಹಾಕದಿದ್ದನ್ನು ದೃಢಪಡಿಸಿ ಗೈರಾಗಿರುವ ಕುರಿತು ರಿಮ್ಸ್ ನಿರ್ದೇಶಕರು ನೀಡಿದ ವರದಿ ಆಧಾರಿಸಿ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.