ರಾಯಚೂರು | ವೈದ್ಯಕೀಯ, ವೈದ್ಯಕೀಯೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರಾಯಚೂರು : ಜಿಲ್ಲೆಯ ಸಿರವಾರ ಹಾಗೂ ಜವಳಗೇರಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ವೃಂದದ ವೈದ್ಯಕೀಯ ಹಾಗೂ ವೈದ್ಯಕೀಯೇತರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮೇರಿಟ್ ಕಮ್ ರೋಷ್ಟರ್ ಆಧಾರದಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀ-ರೋಗ ತಜ್ಞರ 2 ಹುದ್ದೆಗೆ ಎಂಬಿಬಿಎಸ್, ಡಿಜಿಒ, ಎಂ.ಡಿ (ಒಬಿಜಿ), ಎಂ.ಎಸ್ (ಒಬಿಜಿ) ಡಿಎನ್‌ಬಿ (ಒಬಿಜಿ), ಅರವಳಿಕೆ ತಜ್ಞರ 2 ಹುದ್ದೆಗೆ ಎಂಬಿಬಿಎಸ್, ಎಂ.ಡಿ, ಡಿಎನ್‌ಬಿ (ಒಬಿಜಿ), ಮಕ್ಕಳ ತಜ್ಞರ 2 ಹುದ್ದೆಗಳಿಗೆ ಎಂಬಿಬಿಎಸ್, ಡಿಸಿಹೆಚ್ ಎಂ.ಡಿ, ಜನರಲ್ ಮೆಡಿಸಿನ್ 2 ಹುದ್ದೆಗಳಿಗೆ ಎಂಬಿಬಿಎಸ್, ಎಂ.ಡಿ, ದಂತ ವೈದ್ಯಾಧಿಕಾರಿ 2 ಹುದ್ದೆಗಳಿಗೆ ಬಿಡಿಎಸ್, ಎಂ.ಡಿ.ಎಸ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಎ.15ರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 5.30ಗಂಟೆವರೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಸಭಾಂಗಣದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಮಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.