ರಾಯಚೂರು | ಹೈನುಗಾರಿಕೆ ಉತ್ತೇಜನಕ್ಕಾಗಿ ಹಾಲು ಉತ್ಪಾದಕರ ಸಹಕಾರ ಸಂಘ ರಚಿಸಿ : ಶಿವಪೂರಿ

ರಾಯಚೂರು : ಸುಸ್ಥಿರ ಜೀವನೋಪಾಯ ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾದ್ಯಂತ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ರಚಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶಶಿಕಾಂತ ಶಿವಪೂರೆ ಅವರು ಹೇಳಿದರು.
ಎ.25ರ ಶುಕ್ರವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 45 ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಚುನಾವಣೆಗಳನ್ನು ಮುಕ್ತಾಯಗೊಳಿಸಿರುವ ಪ್ರಯುಕ್ತ ಚುನಾವಣೆಯಾದ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅಥವಾ ಮುಖ್ಯ ಪ್ರವರ್ತಕರುಗಳಿಗೆ ಸುಸ್ಥಿರ ಜೀವನೋಪಾಯ ಕೈಗೊಳ್ಳಲು ಸಹಕಾರ ಸಂಘಗಳ ಉತ್ತೇಜನಕ್ಕಾಗಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸದರು ಜಿಲ್ಲೆಯಲ್ಲಿ ಸುಮಾರು 100 ಹಾಲು ಉತ್ಪಾಕರ ಸಹಕಾರಿ ಸಂಘ ರಚನೆ ಮಾಡುವ ದೂರದೃಷ್ಠಿಯನ್ನು ಹೊಂದಿರುತ್ತಾರೆ, ಗ್ರಾಮಿಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ, ಹಾಲಿಗೆ ಮಾರುಕಟ್ಟೆ ಒದಗಿಸುವುದರ ಮೂಲಕ ಉತ್ತಮವಾಗಿಕಾರ್ಯನಿರ್ವಹಿಸುತ್ತಿದೆ, ದೈನಂದಿನ ವ್ಯವಹಾರದೊಂದಿಗೆ ಸ್ವ-ಸಹಾಯ ಗುಂಪುಗಳ ಪರಿಕಲ್ಪನೆಯನ್ನು ಅಳವಡಿಸಿ ಹಾಲು ಉತ್ಪಾದಕ ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ನಾಯಕತ್ವ ಗುಣವನ್ನು ಮೂಡಿಸಲು ಸಹಕಾರಿವಾಗಿದ್ದು, ಇದರಿಂದ ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾಲ್ಗೋಳ್ಳುವಿಕೆ ಹೆಚ್ಚಾಗಿ ಇವರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶ ಈಡೇರಿಸಿದಂತಾಗುತ್ತದೆ, ಇದರಿಂದ ಉಳಿತಾಯ ಪ್ರವೃತ್ತಿಯನ್ನು ರೂಢಿಸಬಹುದು, ಆಂತರಿಕ ಸಾಲವನ್ನು ಅವಶ್ಯಕತೆಗೆ ತಕ್ಕಂತೆ ಪಡೆಯಬಹುದು, ಈ ಸಾಲದ ಮೋತ್ತದಿಂದ ರಾಸುಗಳ ಖರೀಧಿಯನ್ನು ಪ್ರೋತ್ಸಾಹಿಸಿ ಹೈನುಗಾರಿಕೆ ಮಾಡುವರ ಸಂಖ್ಯೆ ಹೆಚ್ಚಿಸಬಹುದಾಗಿದೆ ಎಂದರು.
ಹಸು ಮರಣಕ್ಕೆ 10 ಸಾವಿರ ರೂ. ಪರಿಹಾರ :
ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟ ಬಳ್ಳಾರಿ ವ್ಯವಸ್ಥಾಪಕರು ನಿರ್ದೇಶಕರಾದ ಪ್ರಭುಶಂಕರ ಅವರು ಮಾತನಾಡಿ, ಪಶು ಇಲಾಖೆಯಿಂದ ಅನುಗ್ರಹ ಯೋಜನೆಯಡಿ ಯಾವುದೇ ಹಸು ಮರಣ ಹೊಂದಿದರೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದಕ್ಕೆ ವಿಮೆ ಅವಶ್ಯಕತೆಯಿಲ್ಲ, ಕೆಎಂಎಫ್ ವತಿಯಿಂದ ಒಬ್ಬ ಡಾಕ್ಟರ್ ಸೌಲಭ್ಯ ಒದಗಿಸುವುದು. ರಾಸುಗಳಿಗೆ ಆಹಾರ ಸೌಲಭ್ಯ ಒದಗಿಸುವುದು, ಕಡ್ಡಾಯವಾಗಿ ವಿಮೆ ಮಾಡಿಸುವುದು. ಹಾಲಿನ ಉತ್ಪಾದನೆ ಹೆಚ್ಚಿಸಲು ತರಬೇತಿ ನೀಡಲಾಗುವುದು. ಪಶು ಇಲಾಖೆಯಿಂದ 1962 ಅಂಬುಲೆನ್ಸ್ ಸೇವೆ, ಕನಿಷ್ಠ ಬೆಲೆ 40 ರೂ. ಪ್ರತಿ ಲಿಟರ್ ಸಿಗುತ್ತದೆ, ಪ್ರತಿ ಸಹಕಾರಿ ಸಂಘದಿಂದ ಕನಿಷ್ಟ 50 ರಿಂದ 100 ಲೀಟರ್ ಹಾಲಿನ ಉತ್ಪಾದನೆಯಾಗಬೇಕು, ಈ ತಿಂಗಳಲ್ಲಿ ಕೆಎಂಎಫ್ ಕಡೆಯಿಂದ ಎಲ್ಲಾ ಪರಿಕರಗಳನ್ನು ಒದಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಉಪ ವ್ಯವಸ್ಥಾಕರು ಎ.ಹನುಮಂತರೆಡ್ಡಿ, ಮುಖ್ಯ ಪಶುವೈದ್ಯಾಧಿಕಾರಿ ಶ್ರಿನಿವಾಸ ಮೂರ್ತಿ, ಸಹಕಾರಿ ಸಂಘ ನೋದಣಿ ಇಲಾಖೆ ಸಿದ್ದಣ್ಣ, ಎನ್ ಆರ್ ಎಲ್‌ಎಂ ಜಿಲ್ಲಾ ವ್ಯವಸ್ಥಾಪಕರು ವಿಜಯಕುಮಾರ, ಶ್ರೀಕಾಂತ ಬನ್ನಿಗೊಳ ಹಾಗೂ ನೂತನ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮತ್ತು ಪ್ರವರ್ತಕರು ಸೇರಿದಂತೆ ಇತರರು ಇದ್ದರು.