ರಾಯಚೂರು | ಗೆಜ್ಕಲಗಟ್ಟಾ ಗ್ರಾ.ಪಂ ನಲ್ಲಿ ನರೇಗಾ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
Update: 2025-04-24 18:57 IST

ರಾಯಚೂರು : ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯತ್ ವೀರಾಪುರು ಗ್ರಾಮದಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನ ಎ.14ರಿಂದ ಮೇ 3ರವರೆಗೆ ಕೂಲಿಕಾರರ ಕೆಲಸಕ್ಕೆ ಹೋಗಿ ಜಾಬ್ ಕಾರ್ಡ್ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು
ಪಿಡಿಓ ಗುರುಸಿದ್ದಪ್ಪ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಜಾಬ್ ಕಾರ್ಡ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸಮರ್ಪಕವಾಗಿ ಜಾಬ್ ಕಾರ್ಡ್ ಇಲ್ಲದವರಿಗೆ ಗ್ರಾಮ ಪಂಚಾಯತ್ ವತಿಯಿಂದ ಹೂಸ ಜಾಬ್ ಕಾರ್ಡ್ ಹಾಗೂ ಸೇರ್ಪಡೆ ಬಗ್ಗೆ ಇನ್ನೂ ಹಲವು ವಿಷಯಗಳ ಕುರಿತು ಕೂಲಿಕಾರರ ಜೊತೆ ಹಂಚಿಕೂಂಡರು.
ಈ ಸಂದರ್ಭದಲ್ಲಿ ಕಾಯಕ ಬಂದು ಮಿತ್ರ ಆದಾ ಶಿವಪುತ್ರ ನೀಲ್ಲೋಗಲ್, ಮೇಟ್ ಗಳಾದ ನಿಂಗಪ್ಪ ಎಂ.ವೀರಾಪೂರು, ಲಿಂಗರಾಜ ದೇಸಾಯಿ, ನಿಂಗಮ್ಮ ಹಾಗೂ ನೂರಾರು ಕೂಲಿಕಾರರು ಇದ್ದರು.