ರಾಯಚೂರು | ವ್ಯಕ್ತಿ ಕಾಣೆ : ಪತ್ತೆಗೆ ಪೊಲೀಸರ ಮನವಿ
Update: 2025-04-24 18:00 IST

ಸಿದ್ದಪ್ಪ
ರಾಯಚೂರು : ಇಲ್ಲಿನ ದೇವದುರ್ಗ ತಾಲೂಕಿನ ಬಸವಂತಪುರ ಗ್ರಾಮದ ಚಾಲಕನಾದ ಸಿದ್ದಪ್ಪ (35) ಅವರು ಕಾಣೆಯಾದ ಬಗ್ಗೆ ಗಬ್ಬೂರು ಠಾಣೆಯಲ್ಲಿ ಗುನ್ನೆ ನಂ-55/2025 ಕಲಂರಡಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.
ಯುವಕನ ಚಹರೆ :
ಸದೃಢ ದೇಹ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, 5.0 ಅಡಿ ಎತ್ತರ ಇದ್ದಾರೆ. ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ಮತ್ತು ಬಿಳಿ ಬಣ್ಣದ ಲುಂಗಿ ಧರಿಸಿ ಹೋಗಿರುತ್ತಾನೆ. ಈ ಭಾವಚಿತ್ರದಲ್ಲಿ ಇರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಗಬ್ಬೂರು ಠಾಣೆ ನಂ-9480803860, ಸಿಪಿಐ ದೇವದುರ್ಗ-ಮೊ:9480803835 ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ ಎಂದು ಪಿ.ಎಸ್.ಐ. ಗಬ್ಬೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.