ರಾಯಚೂರು | ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘದಿಂದ ಧರಣಿ

Update: 2024-11-11 11:30 GMT

ರಾಯಚೂರು : ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಟಿಪ್ಪು ಸುಲ್ತಾನ್ ಗಾರ್ಡನಲ್ಲಿ ಧರಣಿ ನಡೆಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯನ್ನು 2023-24ನೇ ಸಾಲಿನಲ್ಲಿ ಬರಗಾಲ ಎಂದು ಘೋಷಣೆಮಾಡಿದ್ದು, ಜಿಲ್ಲೆಯ ರೈತರಿಗೆ ಬರ ಪರಿಹಾರದ ಹಣ ದೊರತ್ತಿಲ್ಲ. ತಕ್ಷಣ ಬರ ಪರಿಹಾರ ನೀಡಬೇಕು, 2023-24ನೇ ವರ್ಷದಲ್ಲಿ ಅತಿಯಾದ ಮಳೆಯಿಂದ ನದಿ, ಹಳ್ಳ ಮತ್ತು ತಗ್ಗು ಪ್ರದೇಶದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದ್ದು, ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು, ರೈತರ ಪಂಪ್‌ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ 3 ಫೇಸ್ ಒದಗಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಧರಣಿಯಲ್ಲಿ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ದೊಡ್ಡ ಬಸನಗವಘಡ ಬಲ್ಲಟಗಿ, ಸೂಗೂರಯ್ಯ, ಯಂಕಪ್ಪ ಕಾರಬಾರಿ, ಪ್ರಭಾಕರ್ ಪಾಟೀಲ್, ಲಿಂಗಾರೆಡ್ಡಿಗೌಡ, ಬಸವರಾಜ್ ಮಾ.ಪ., ಹನುಮಗೌಡ ನಾಯಕ, ಬೂದೆಯ್ಯಸ್ವಾಮಿ ಗಬ್ಬೂರು, ರಮೇಶ ಅಬಕಾರಿ, ಶಾಂತಪ್ಪಗೌಡ, ವೀರೇಶ ಗವಿಗಠ, ಪ್ರಭಾಕರ್ ಪಾಟೀಲ್, ಹನುಮಗೌಡನಾಯಕ, ಅಮರಣ್ಣ ಗುಡಿಹಾಳ, ಮಲ್ಲಣ್ಣ, ದಿನ್ನಿ, ವೀರೇಶ ಗವಿಗಠ, ದೊಡ್ಡ ಬಸನಗೌಡ ಬಲ್ಲಟಗಿ, ಲಿಂಗಾರೆಡ್ಡಿಗೌಡ, ಶಾಂತಪ್ಪಗೌಡ ಮಾಲಿ ಪಾಟೀಲ್, ಯಂಕಪ್ಪ ಕಾರಬಾರಿ, ಬಸವರಾಜ ಮಾಲಿ ಪಾಟೀಲ್, ಸಿದ್ದಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News