ರಾಯಚೂರು | ಮೃತ ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರಿಂದ ಮನವಿ

Update: 2025-03-19 18:06 IST
ರಾಯಚೂರು | ಮೃತ ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರಿಂದ ಮನವಿ
  • whatsapp icon

ರಾಯಚೂರು : ಇಲ್ಲಿನ ರೈಲ್ವೇ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಯಚೂರು ಮತ್ತು ಮರಿಚಟ್ಟಾಳ ರೈಲ್ವೇ ನಿಲ್ದಾಣಗಳ ಮದ್ಯೆ ರೈಲ್ವೆ ಕಿ.ಮೀ ನಂ: 562/6-8 ಡೌನ್‌ಲೈನ್‌ನಲ್ಲಿ ಮಾ.18ರಂದು ಯಾವುದೋ ಚಲಿಸುವ ರೈಲುಗಾಡಿಯಿಂದ ಆಯಾತಪ್ಪಿ ಕೆಳಗೆಬಿದ್ದು ಸುಮಾರು 55ವರ್ಷದ ಅಪರಿಚಿತ ಮಹಿಳೆ ಮೃತಪಟ್ಟಿದ್ದು, ಈ ಕುರಿತು ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ:21/2025 ಕಲಂ 194ಬಿ.ಎನ್.ಎಸ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಮೃತಳ ವಾರಸುದಾರರ ಪತ್ತೆಗೆ ಮನವಿ ಮಾಡಲಾಗಿದೆ.

ಮೃತಳ ಚಹರೆ ಪಟ್ಟಿಯ ವಿವರ; ವಯಸ್ಸು ಸುಮಾರು 55 ವರ್ಷ, ಎತ್ತರ ಸುಮಾರು 5.1 ಅಡಿ, ಸಾದಾಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಸಣ್ಣ ಕಿವಿ, ದಪ್ಪ ಮೂಗು ತಲೆಯಲ್ಲಿ 01 ಇಂಚು ಬಿಳಿ ಕೂದಲು ಹೊಂದಿಲಾಗಿದ್ದು, ಒಂದು ಬೂದು ಬಣ್ಣದ ಹೂವಿನ ಡಿಸೈನ್ ಪಾಲಿಸ್ಟರ್ ಸೀರೆ, ಒಂದು ಹಸಿರು ಬಣ್ಣದ ಕುಪ್ಪಸ, ಒಂದು ನೀಲಿ ಬಣ್ಣದ ಲಂಗಾ. ಒಂದು ಬಿಳಿ ಬಣ್ಣದ ದಾರ ಕೊರಳಲ್ಲಿ ಧರಿಸಲಾಗಿದೆ.

ಈ ಮೃತಳ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತಳ ಹೋಲಿಕೆಯ ಮಹಿಳೆ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-231716 ಅಥವಾ ಮೊ.ನಂ:9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರೈಲ್ವೇ ಪೊಲೀಸ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News