ರಾಯಚೂರು | ಜಾತ್ರೆಗೆ ಬಂದ ಇಬ್ಬರು ಮಕ್ಕಳು ಕಾಲುವೆಗೆ ಬಿದ್ದು ನೀರು ಪಾಲು
Update: 2025-04-07 16:06 IST

ಸಾಂದರ್ಭಿಕ ಚಿತ್ರ
ರಾಯಚೂರು: ಕುಟುಂಬ ಸಮೇತ ಜಾತ್ರೆಗೆ ಬಂದಿದ್ದ ಮಕ್ಕಳಿಬ್ಬರು ಕಾಲುವೆಯಲ್ಲಿ ಬಿದ್ದು ನೀರು ಪಾಲಾದ ಘಟನೆ ಭಾನುವಾರ ಸಂಜೆ ನಡೆದಿದೆ.
ತೆಲಂಗಾಣ ರಾಜ್ಯದ ಗದ್ವಾಲ್ ಮೂಲದ ಅಂಜಲಿ (17) ಹಾಗೂ ಆಂಧ್ರಪ್ರದೇಶದ ಎಮ್ಮಿಗನೂರಿನ ಬಾಬು (14) ನೀರಿನಲ್ಲಿ ಕೊಚ್ಚಿಹೋದ ಮಕ್ಕಳು ಎಂದು ತಿಳಿದು ಬಂದಿದೆ.
ರಾಯಚೂರು ತಾಲೂಕಿನ ಗಾಣದಾಳ ಗ್ರಾಮದ ಪಂಚಮುಖಿ ಆಂಜನೇಯ ಜಾತ್ರೆಗೆ ಬಂದಿದ್ದ ಮಕ್ಕಳಿಬ್ಬರು ಕಾಲುವೆಯಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಥಳೀಯರು ಅಗ್ನಿಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಕ್ಕಳ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.