ರಾಯಚೂರು | ಕಾಡುಹಂದಿ ದಾಳಿ : ಕುರಿಗಾಯಿ ಗಂಭೀರ ಗಾಯ
Update: 2025-04-25 17:04 IST

ಸಾಂದರ್ಭಿಕ ಚಿತ್ರ (Photo credit: wikipedia)
ರಾಯಚೂರು : ಕಾಡುಹಂದಿ ದಾಳಿಯಿಂದ ಕುರಿಗಾಯಿ ಓರ್ವ ಗಾಯಗೊಂಡಿರುವ ಘಟನೆ ಲಿಂಗಸುಗೂರು ತಾಲ್ಲೂಕು ಮುದಗಲ್ ಪಟ್ಟಣದ ವ್ಯಾಪ್ತಿಯ ಕುಮಾರ್ ಖೇಡ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗಾಯಗೊಂಡ ಕುರಿಗಾಯಿಯನ್ನು ಹನುಮಂತ 35) ಎಂದು ಗುರುತಿಸಲಾಗಿದೆ.
ಕುರಿ ಕಾಯಲು ಹೋದಾಗ ಏಕಾಏಕಿ ಕಾಡುಹಂದಿ ದಾಳಿ ನಡೆಸಿದೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ 108 ಆರೋಗ್ಯ ರಕ್ಷಕವಚ ಸಿಬ್ಬಂದಿ ಬಸಲಿಂಗಪ್ಪ ನಿರಲ್ ಕೇರಿ, ಹಾಗೂ ಪೈಲೆಟ್ ಮಾಹಂತೇಶ್ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮುದಗಲ್ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.