ರಾಯಚೂರು | ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಭೇಟಿ

ರಾಯಚೂರು : ಜಿಲ್ಲೆಯ ರಾಯಚೂರು ತಾಲೂಕಿನ ಜೇಗರಕಲ್ ಮತ್ತು ಮನ್ಸಲಾಪೂರು ಗ್ರಾಮ ಪಂಚಾಯತಿಗಳಿಗೆ ಶರಣಬಸವರಾಜ ಕೆಸರಟ್ಟಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ರಾಯಚೂರು ರವರು ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಇಂದು ಸೋಮವಾರ ತಾಲೂಕಿನ ಜೇಗರಕಲ್ ಗ್ರಾಮ ಪಂಚಾಯತ್‌ನ ಮೀರಾಪೂರು ಗ್ರಾಮ ಹಾಗೂ ಮನ್ಸಲಾಪೂರು ಗ್ರಾಮದ ಮರ್ಚೇಡ್ ಗ್ರಾಮದಲ್ಲಿ ಈಗಾಗಲೇ ಸ್ಥಾಪಿಸಲಾದ ಕೂಸಿನ ಮನೆಗಳಿಗೆ ಭೇಟಿ ನೀಡಿ, ಕೇಂದ್ರದಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.
ನಂತರ ಶಿಶುಪಾಲನಾ ಕೇಂದ್ರದಲ್ಲಿರುವ ಮಕ್ಕಳೊಂದಿಗೆ ಬೆರೆತರು, ಅರೈಕೆದಾರರೊಂದಿಗೆ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿರುವ ಬಗ್ಗೆ ಮಾಹಿತಿ ಪಡೆದರು.
ಕೇಂದ್ರಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯಗಳು ಹಾಗೂ ಪ್ರತಿ ದಿನ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಕೇರ್ ಟೇಕರ್ಸ ರವರಿಗೆ ಕೂಲಿ ಪಾವತಿ ಮಾಡಬೇಕೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹನುಮಂತ ಸ.ನಿ.(ನರೇಗಾ) ಸ.ನಿ ಶಿವಪ್ಪ ( ಪಂ.ರಾಜ್) ತಾ.ಪಂ ರಾಯಚೂರು, ಪಿಡಿಒ ಅನ್ನಪೂರ್ಣ ಮತ್ತು ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.