ಸಿರವಾರ | ಮಮತೆ ಫೌಂಡೇಷನ್ ಟ್ರಸ್ಟ್ ವತಿಯಿಂದ ಎ.26ರಂದು ಸಾಮೂಹಿಕ ವಿವಾಹ

ಸಿರವಾರ : ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ ರಾಮ್ ಹಾಗೂ ಬಸವೇಶ್ವರ ಜಯಂತೋತ್ಸವ ಅಂಗವಾಗಿ 51 ಜೋಡಿಗಳ ಸರ್ವ ಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುತ್ತಮುತ್ತಲಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಕೀಲರು ಹಾಗೂ ಮಮತೆ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಪೆದ್ದಪ್ಪ ಹಿರೇಹಣಿಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಿರೇಹಣಗಿ ಗ್ರಾಮದಲ್ಲಿ ಎ.26 ರಂದು ಸರ್ವ ಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಅಯೋಜನೆ ಮಾಡಿದ್ದು, ಈ ಭಾಗದ ಬಡವರು, ರೈತಾಪಿ ವರ್ಗ ಅನುಕೂಲಕ್ಕಾಗಿ ಟ್ರಸ್ಟ್ ವತಿಯಿಂದ ನಡೆಯುವ ಈ ವಿವಾಹ ಕಾರ್ಯಕ್ರಮ ಉಚಿತವಾಗಿದ್ದು, ತಾಲೂಕಿನ ಸಮಸ್ತ ಬಡ ಕುಟುಂಬದವರು ಹಾಗೂ ಸರಳವಾಗಿ ವಿವಾಹ ಬಯಸಿರುವವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ಹೇಳಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವಿವಿಧ ಪೂಜ್ಯರ ಹಾಗೂ ರಾಜಕೀಯ ಮುಖಂಡರುಗಳ ಆಗಮಿಸಲಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳ ವಿವಾಹ ಮಾಡಿಕೊಂಡ ಪ.ಜಾತಿ, ಪಂಗಡದ ದಂಪತಿಗೆ ಸರಳ ವಿವಾಹ ಯೋಜನೆಯಡಿ ಜೀವನೋಪಾಯಕ್ಕಾಗಿ ಸುಮಾರು 50 ಸಾವಿರ ರೂ. ಆರ್ಥಿಕ ನೆರವು ಒದಗಿಸಲಾಗುವುದು.
ವಿಶೇಷ ಸೂಚನೆ :
ಸಾಮೂಹಿಕ ವಿವಾಹ ನೊಂದಣಿಗೆ ಎ.20 ಕೊನೆಯ ದಿನಾಂಕವಾಗಿದ್ದು ವಧು ವರರು ತಂದೆ ತಾಯಿ ಆಧಾರ್ ಕಾರ್ಡ್, 4 ಭಾವಚಿತ್ರ, ಪ.ಜಾ ಪ.ಪಂ ವರ್ಗದವರು ಜಾತಿ ಪ್ರಮಾಣ ಪತ್ರ, ಅಕ್ಷರಸ್ಥರು ಎಸೆಸೆಲ್ಸಿ ಅಂಕಪಟ್ಟಿ, ಟಿ.ಸಿ ಹಾಗೂ ಅನಕ್ಷರಸ್ಥರು ವೈದ್ಯರಿಂದ ದೃಡೀಕರಣ ಪ್ರಮಾಣ ಪತ್ರ ಈ ಎಲ್ಲಾ ದಾಖಲೆಗಳನ್ನು ಸಿರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅವಗಾಹನೆಗೆ ತಿಳಿಸಲಾಗುತ್ತದೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ ಮಂಜುನಾಥ ಮಲ್ಲಟ, ಆರ್ ಪಿ ಐ ಹುಲಿಗೇಪ್ಪ ಸೈದಾಪೂರು, ಫಕೀರಪ್ಪ ಕಡದಿನ್ನಿ, ಶಿವಕುಮಾರ್ ಹೀರೆ ಹಣಗಿ, ಎಸ್ಡಿಎಂಸಿ ಅಧ್ಯಕ್ಷ ಅಮರೇಶ ನಾಯಕ ಸೇರಿದಂತೆ ಇತರರಿದ್ದರು.