ಲಿಂಗಸುಗೂರು ತಾಲೂಕಿನ‌ ವಿವಿಧೆಡೆ ಗಾಳಿ ಮಳೆ : ಉರುಳಿದ ಮರಗಳು, ಅಪಾರ ಹಾನಿ

Update: 2025-04-24 19:05 IST
ಲಿಂಗಸುಗೂರು ತಾಲೂಕಿನ‌ ವಿವಿಧೆಡೆ ಗಾಳಿ ಮಳೆ : ಉರುಳಿದ ಮರಗಳು, ಅಪಾರ ಹಾನಿ
  • whatsapp icon

ರಾಯಚೂರು : ಜಿಲ್ಲೆಯ ವಿವಿಧೆಡೆ ಗುಡುಗು, ಗಾಳಿ‌ಸಹಿತ ಮಳೆ ಬಿದ್ದಿದ್ದು, ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಜತ್ತಿ ಲೈನ್, ಗಾಂಧಿ‌ಮೈದಾನ, ಕಾಕಾ ನಗರದ ಬಳಿ ಗಿಡ ಮರಗಳು ನೆಲಕ್ಕೆ ಉರುಳಿವೆ.

ಹಟ್ಟಿ ಪಟ್ಟಣದ ಹಲವೆಡೆ ಅಲಿಕಲ್ಲು ಬಿದ್ದಿದೆ. ಮರಗಳ ಕೊಂಬೆಗಳು ಮನೆಗಳ ಮೇಲ್ಚಾವಣಿಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಅಲ್ಲದೇ ಗುರುಗುಂಟಾ ರಸ್ತೆಯ ಕೋಠಾ ಕ್ರಾಸ್ ಬಳಿಯಲ್ಲಿ ನಿರ್ಮಾಣ ಹಂತದ ದೊಡ್ಡ ವಾಣಿಜ್ಯ ಸಂಕೀರ್ಣ ಉರುಳಿ ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ಕೆಲವು ತಗ್ಗು ಪ್ರದೇಶದ ಮನೆಗಳಲ್ಲಿ ಮಳೆ ನೀರು ಹೋಗಿವೆ.‌ ನೀರು ಹೊರಹಾಕಲು ನಿವಾಸಿಗಳು ಹರ ಸಾಹಸ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ 40 ಡಿಗ್ರಿ ಸೆಲ್ಸಿಯಸ್ ಆಸುಪಾಸು ಬಿಸಿಲಿ ಇದ್ದರಿಂದ ಬಿಸಿಲಿನಿಂದ ಬಸವಳಿದ ಜನರಿಗೆ ಸಂಜೆ 5 ಗಂಟೆಗೆ ಸುರಿದ ಗಾಳಿ ಮಳೆಯಿಂದ ತಂಪೆರಗಿತು.

ಮರಗಳು ಬಿದ್ದ ಕಾರಣ ವಿದ್ಯುತ್ ಕಡಿತವಾಗಿ ಸಾರ್ವಜನಿಕರು ಪರದಾಡಿದರು. ಕೆಲವು ಮನರಗಳ‌ ಟೀನ್ ಶೀಟ್ ಗಳು ಗಾಳಿಗೆ ಹಾರಿ ಹೋಗಿವೆ. ಪಾನ್ ಬೀಡಾ ಡಬ್ಬಾಗಳು ಉರುಳಿ‌ಬಿದ್ದಿವೆ.

 

 

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News