ಹೊಸನಗರ: ಕಾರು- ಬೈಕ್ ಢಿಕ್ಕಿ; ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಸಚಿವ ಮಧು ಬಂಗಾರಪ್ಪ
Update: 2025-04-21 11:37 IST

ಸೊರಬ : ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕುಪ್ಪಗಡ್ಡೆ ಬಳಿ ಸೋಮವಾರ ನಡೆದಿದೆ.
ಹೊಸನಗರ ಪ್ರಗತಿ ಪರಿಶೀಲನ ಸಭೆಗೆ ಹೋಗುವ ಮಾರ್ಗ ಮಧ್ಯೆ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗಾಯಳುಗಳನ್ನು ತಮ್ಮ ಕಾರಿನಲ್ಲಿಯೇ ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸುವಂತೆ ಆಪ್ತ ಸಹಾಯಕರಿಗೆ ಆದೇಶಿಸಿದರು .
ಬಳಿಕ ನೆರೆದಿದ್ದ ಗ್ರಾಮಸ್ಥರ ಬಳಿ ಮಾಹಿತಿ ಪಡೆದು, ಢಿಕ್ಕಿ ಹೊಡೆದು ಪರಾರಿಯಾದ ಕಾರಿನ ಮಾಹಿತಿ ಪಡೆಯಲು ಪೊಲೀಸ್ ಇಲಾಖೆಗೆ ಸೂಚಿಸಿದರು. ತಮ್ಮ ಆಪ್ತ ಸಹಾಯಕನನ್ನು ಆಸ್ಪತ್ರೆಗೆ ಕಳುಹಿಸಿ ಗಾಯಾಳುಗಳ ಆರೋಗ್ಯದ ಮಾಹಿತಿಯನ್ನು ನೀಡುವಂತೆ ಆದೇಶಿಸಿದರು.