ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ವಿಜ್ಞಾನ ವಿಭಾಗದಲ್ಲಿ ದೀಕ್ಷಾ ರಾಜ್ಯಕ್ಕೆ ಪ್ರಥಮ
Update: 2025-04-26 15:59 IST
ದೀಕ್ಷಾ
ಶಿವಮೊಗ್ಗ : ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದರೂ ಒಂದು ಅಂಕದಿಂದ ಹಿನ್ನಡೆ ಅನುಭವಿಸಿದ್ದ ತೀರ್ಥಹಳ್ಳಿಯ ವಾಗ್ದೇವಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಮರುಮೌಲ್ಯಮಾಪನದಲ್ಲಿ 600ಕ್ಕೆ 600 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ಕೆಮಿಸ್ಟ್ರಿಯಲ್ಲಿ ಈ ಮೊದಲು 100ಕ್ಕೆ 99 ಅಂಕ ನೀಡಲಾಗಿತ್ತು. ಮರುಮೌಲ್ಯಮಾಪನಕ್ಕೆ ದೀಕ್ಷಾ ಅರ್ಜಿ ಹಾಕಿದ್ದರು. ಮರು ಮೌಲ್ಯಮಾಪನದಲ್ಲಿ 100ಕ್ಕೆ 100 ಅಂಕ ಸಿಕ್ಕಿದ್ದು, ಈ ಬಾರಿಯ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.