ಶಿವಮೊಗ್ಗ: ನದಿಯಲ್ಲಿ ಈಜಲು ಹೋಗಿದ್ದ ಬಿಹಾರಿ ಮೂಲದ ಯುವಕ ನೀರು ಪಾಲು

Update: 2024-01-10 11:42 GMT

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಈಜಲು ಹೋದ ಬಿಹಾರಿ ಮೂಲದ ಯುವಕನೋರ್ವ ನೀರುಪಾಲದ ಘಟನೆ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಜಾತ್ರೆ ವ್ಯಾಪಾರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಿಹಾರದಿಂದ ಕುಟುಂಬವೊಂದು ಬಂದಿದ್ದು ಅದರಲ್ಲಿ ತಂದೆ-ಮಗ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿದೆ. ಸ್ಥಳೀಯರಾದ ಮುಳುಗು ತಜ್ಞ ಪ್ರಮೋದ್ ಪೂಜಾರಿ ಮತ್ತು ತಂಡ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News