ಶಿವಮೊಗ್ಗ: ಯುವಕನಿಗೆ ಚೂರಿ ಇರಿತ; ಆರೋಪಿ ಪೊಲೀಸ್‌ ವಶಕ್ಕೆ

Update: 2025-03-16 14:46 IST
ಶಿವಮೊಗ್ಗ: ಯುವಕನಿಗೆ ಚೂರಿ ಇರಿತ; ಆರೋಪಿ ಪೊಲೀಸ್‌ ವಶಕ್ಕೆ
  • whatsapp icon

ಶಿವಮೊಗ್ಗ: ಭಿನ್ನಕೋಮಿನ ಯುವಕರ ಮಧ್ಯೆ ಕ್ಷುಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಶನಿವಾರ (ಮಾ.15) ರಾತ್ರಿ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ನಡೆದಿದೆ.

ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ವಾಹನ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಬೈಕ್ ನ ಹಾರ್ನ್ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಯುವಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ ಇದ್ದ ಹಣ್ಣಿನ ಅಂಗಡಿಯಲ್ಲಿದ್ದ ಚಾಕು ತೆಗೆದು ಇರಿಯಲಾಗಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಯುವಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.

ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News