4-ನೇಶನ್ಸ್ ಹಾಕಿ ಟೂರ್ನಮೆಂಟ್; ಸ್ಪೇನ್ಗೆ 2-1 ಅಂತರದ ಸೋಲುಣಿಸಿದ ಭಾರತೀಯ ಜೂನಿಯರ್ ಮಹಿಳೆಯರು

Update: 2023-08-22 16:37 GMT

Photo: twitter/TheHockeyIndia

ಡಸಲ್ಡಾರ್ಫ್ (ಜರ್ಮನಿ: ಜರ್ಮನಿಯ ಡಸಲ್ಡಾರ್ಫ್ನಲ್ಲಿ ನಡೆಯುತ್ತಿರುವ 4-ನೇಶನ್ಸ್ ಟೂರ್ನಮೆಂಟ್ನಲ್ಲಿ ಮಂಗಳವಾರ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಸ್ಪೇನ್ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದೆ.

ಭಾರತದ ಪರವಾಗಿ ಅನು 21ನೇ ನಿಮಿಷದಲ್ಲಿ ಮತ್ತು ಸಾಕ್ಷಿ ರಾಣಾ 47ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು. ಸ್ಪೇನ್ನ ಏಕೈಕ ಗೋಲನ್ನು ಲಿಮಾ ತೆರೇಸಾ 23ನೇ ನಿಮಿಷದಲ್ಲಿ ದಾಖಲಿಸಿದರು.

ಪಂದ್ಯದ ಮೊದಲ ಗೋಲನ್ನು ಅನು 21ನೇ ನಿಮಿಷದಲ್ಲಿ 1-1ರಲ್ಲಿ ಸಮಗೊಳಿಸಿದರು.

ಮೂರನೇ ಕ್ವಾರ್ಟರ್ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ನಾಲ್ಕನೇ ಕ್ವಾರ್ಟರ್ನಲ್ಲಿ ಸಾಕ್ಷಿ ಬಾರಿಸಿದ ಫೀಲ್ಡ್ ಗೋಲು ಭಾರತದ ವಿಜಯವನ್ನು ಖಚಿತಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News