ಆಸ್ಟ್ರೇಲಿಯದ 5 ವಾಟರ್ ಪೋಲೊ ಆಟಗಾರರಿಗೆ ಕೋವಿಡ್

Update: 2024-07-24 22:41 IST
ಆಸ್ಟ್ರೇಲಿಯದ 5 ವಾಟರ್ ಪೋಲೊ ಆಟಗಾರರಿಗೆ ಕೋವಿಡ್

 PC : olympics.com

  • whatsapp icon

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಆರಂಭಗೊಳ್ಳಲು ಕೇವಲ ಎರಡು ದಿನಗಳು ಇರುವಂತೆಯೇ, ಆಸ್ಟ್ರೇಲಿಯದ ಮಹಿಳಾ ವಾಟರ್ ಪೋಲೊ ತಂಡದ ಐವರು ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಆಸ್ಟ್ರೇಲಿಯದ ಒಲಿಂಪಿಕ್ ತಂಡದ ಮುಖ್ಯಸ್ಥೆ ಆನಾ ಮಿಯರ್ಸ್ ಬುಧವಾರ ತಿಳಿಸಿದ್ದಾರೆ.

ಇಬ್ಬರು ಆಟಗಾರರಲ್ಲಿ ಮಂಗಳವಾರ ಕೋವಿಡ್ ಪತ್ತೆಯಾಗಿದೆ. ಕೋವಿಡ್ ಪ್ರಕರಣಗಳು ವಾಟರ್ ಪೋಲೊ ತಂಡದ ಆಟಗಾರರಿಗೆ ಮಾತ್ರ ಸೀಮಿತವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಯರ್ಸ್ ಹೇಳಿದರು.

‘‘ಇಂದು ಮಧ್ಯಾಹ್ನ ತರಬೇತಿ ಇದೆ. ಆ ಐವರು ಆಟಗಾರ್ತಿಯರು ತರಬೇತಿಯಲ್ಲಿ ಪಾಲ್ಗೊಳ್ಳಲು ಸಮರ್ಥರಾಗಿದ್ದರೆ ಅವರು ಭಾಗವಹಿಸುತ್ತಾರೆ. ಕೋವಿಡ್‌ಗೆ ಸಂಬAಧಿಸಿದ ಎಲ್ಲಾ ಶಿಷ್ಟಾಚಾರಗಳನ್ನು ಅವರು ಪಾಲಿಸುತ್ತಿದ್ದಾರೆ. ಇಡೀ ವಾಟರ್ ಪೋಲೊ ತಂಡವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News