ಪಾಕಿಸ್ತಾನಕ್ಕೆ ಭಾರತದ 'ವಿರಾಟ' ದರ್ಶನ

Update: 2025-02-23 21:48 IST
ಪಾಕಿಸ್ತಾನಕ್ಕೆ ಭಾರತದ ವಿರಾಟ ದರ್ಶನ
  • whatsapp icon

ದುಬೈ : ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ-ಪಾಕಿಸ್ತಾನದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಸೋಲಿಸಿ, ಭರ್ಜರಿ ಜಯ ಗಳಿಸಿದೆ.

ಪಾಕಿಸ್ತಾನ ನೀಡಿದ 242 ರನ್ ಗಳ ಬೆನ್ನಟ್ಟಿದ ಭಾರತವು ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದಿಂದ ಪಾಕಿಸ್ತಾನಕ್ಕೆ 'ಹೈಬ್ರಿಡ್' ಪ್ರದರ್ಶನ ನೀಡಿತು.

ಭಾರತಕ್ಕೆ ಜಯಗಳಿಸಲು ಎರಡು ರನ್ ಬೇಕಿದ್ದಾಗ, ಕೊಹ್ಲಿಗೆ ಶತಕ ಪೂರೈಸಲು 4 ರನ್ ಅಗತ್ಯವಿತ್ತು. ಆಗ ವಿರಾಟ್ ದರ್ಶನ ನೀಡಿದ ಕೊಹ್ಲಿ ಬಾಲ್ ಅನ್ನು ಬೌಂಡರಿ ಗೆ ಎತ್ತಿ ಶತಕ ಪೂರೈಸಿದರು. ತಂಡವನ್ನು ಗೆಲ್ಲಿಸಿ ಭರ್ಜರಿ ಮನರಂಜನೆ ನೀಡಿದರು. ತಾನು ಕಿಂಗ್ ಕೊಹ್ಲಿ ಎನ್ನುವುದನ್ನು ಸಾಬೀತು ಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News