ಈ ವರ್ಷದ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ರಿಷಭ್ ಪಂತ್

Update: 2025-04-27 23:14 IST
ಈ ವರ್ಷದ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ರಿಷಭ್ ಪಂತ್

ರಿಷಭ್ ಪಂತ್ | PC : PTI

  • whatsapp icon

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ವಿರುದ್ಧ ರವಿವಾರ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ 2 ಎಸೆತದಲ್ಲಿ 4 ರನ್ ಗಳಿಸಿ ಔಟಾಗಿರುವ ಲಕ್ನೊ ಸೂಪರ್ ಜಯಂಟ್ಸ್ ತಂಡದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ.

ಪಂತ್ ಅವರು 7ನೇ ಓವರ್ನ 3ನೇ ಎಸೆತದಲ್ಲಿ ಜಾಕ್ಸ್ ಬೌಲಿಂಗ್ನಲ್ಲಿ ಶರ್ಮಾಗೆ ವಿಕೆಟ್ ಒಪ್ಪಿಸಿದರು.

ಪಂತ್ ಈ ವರ್ಷದ ಐಪಿಎಲ್ನಲ್ಲಿ ಆಡಿರುವ 10 ಪಂದ್ಯಗಳ ಪೈಕಿ ಕೇವಲ 110 ರನ್ ಗಳಿಸಿದ್ದು, 63 ಗರಿಷ್ಠ ಸ್ಕೋರಾಗಿದೆ. ಪಂತ್ ತನ್ನ ಮೊದಲಿನ ಲಯವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲವಾದರೆ 2016ರ ನಂತರ ಮೊದಲ ಬಾರಿ ಐಪಿಎಲ್ ಋತುವಿನಲ್ಲಿ 200ಕ್ಕಿಂತ ಕಡಿಮೆ ಸ್ಕೋರ್ ಗಳಿಸಿದ ಅಪಖ್ಯಾತಿಗೆ ಒಳಗಾಗಲಿದ್ದಾರೆ.

ಕಳೆದ ವರ್ಷ ತನ್ನ ಐಪಿಎಲ್ ಪುನರಾಗಮನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 13 ಪಂದ್ಯಗಳಲ್ಲಿ 446 ರನ್ ಗಳಿಸಿದ್ದು, 3 ಅರ್ಧಶತಕಗಳನ್ನು ಗಳಿಸಿದ್ದರು.

ಕಳೆದ ವರ್ಷ ನಡೆದಿದ್ದ ಹರಾಜಿನಲ್ಲಿ ಲಕ್ನೊ ತಂಡವು 27 ಕೋ.ರೂ. ನೀಡಿ ಪಂತ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಲೀಗ್ ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News