ಬುಮ್ರಾರನ್ನು ಹಿಂದಿಕ್ಕುವತ್ತ ಮುಂದುವರಿಯುತ್ತಿರುವ ಅರ್ಶದೀಪ್, ಪಾಂಡ್ಯ

Update: 2024-11-09 17:01 GMT

 ಹಾರ್ದಿಕ್ ಪಾಂಡ್ಯ ಮತ್ತು   ಅರ್ಶದೀಪ್ ಸಿಂಗ್ | PC : BCCI

ಹೊಸದಿಲ್ಲಿ: ಡರ್ಬನ್‌ನಲ್ಲಿ ಶುಕ್ರವಾರ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತವು 61 ರನ್‌ಗಳ ಜಯ ಗಳಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಈಗ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುಂದಿದೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಎಡಗೈ ವೇಗಿ ಅರ್ಶದೀಪ್ ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾರ ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕುವತ್ತ ಮುನ್ನುಗ್ತುತ್ತಿದ್ದಾರೆ. ಬುಮ್ರಾ 70 ಪಂದ್ಯಗಳಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅರ್ಶದೀಪ್ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಒಂದು ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ, 2022ರಲ್ಲಿ ಪದಾರ್ಪಣೆ ಮಾಡಿದ ಬಳಿಕ ಅವರು ಟಿ20 ಕ್ರಿಕೆಟ್‌ನಲ್ಲಿ ಪಡೆದ ವಿಕೆಟ್‌ಗಳ ಸಂಖ್ಯೆ 88ಕ್ಕೇರಿದೆ. ಇದಕ್ಕಾಗಿ ಅವರು 57 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ.

ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ ಭಾರತೀಯರು

ಯುಝ್ವೇಂದ್ರ ಚಾಹಲ್- 80 ಪಂದ್ಯಗಳಲ್ಲಿ 96

ಭುವನೇಶ್ವರ ಕುಮಾರ್- 87 ಪಂದ್ಯಗಳಲ್ಲಿ 90

ಜಸ್ಪ್ರೀತ್ ಬುಮ್ರಾ- 70 ಪಂದ್ಯಗಳಲ್ಲಿ 89

ಅರ್ಶದೀಪ್ ಸಿಂಗ್- 57 ಪಂದ್ಯಗಳಲ್ಲಿ 88

ಹಾರ್ದಿಕ್ ಪಾಂಡ್ಯ- 106 ಪಂದ್ಯಗಳಲ್ಲಿ 87

8.28ರ ಸರಾಸರಿಯೊಂದಿಗೆ ಅರ್ಶದೀಪ್ ಸಿಂಗ್ ಭಾರತದ ವಿಶ್ವಾಸಾರ್ಹ ಬೌಲರ್ ಆಗಿದ್ದಾರೆ. ಅದರಲ್ಲೂ ಮುಖ್ಯವಾಗಿ, ಅತ್ಯಂತ ಒತ್ತಡದ ಸಂದರ್ಭಗಳಲ್ಲಿ ಅವರು ತಣ್ಣಗೆ ಬೌಲ್ ಮಾಡುತ್ತಾರೆ.

106 ಪಂದ್ಯಗಳಿಂದ 87 ವಿಕೆಟ್‌ಗಳನ್ನು ಪಡೆದಿರುವ ಪಾಂಡ್ಯ ಉತ್ತಮ ಆಲ್‌ರೌಂಡರ್ ಆಗಿ ತನ್ನ ಸೇವೆಯನ್ನು ಮುಂದುವರಿಸಿದ್ದಾರೆ.

ಪಾಂಡ್ಯ ಮತ್ತು ಅರ್ಶದೀಪ್ ಇಬ್ಬರೂ ಭಾರತದ 2024 ಟಿ20 ವಿಶ್ವಕಪ್ ಜಯದಲ್ಲಿ ಮಹತ್ವದ ಪಾತ್ರಗಳನ್ನು ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News