ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್ | ಪ್ರಿ-ಕ್ವಾರ್ಟರ್ ಫೈನಲ್‌ ಗೆ ಸಿಂಧು ಲಗ್ಗೆ

Update: 2025-04-10 21:52 IST
ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್ | ಪ್ರಿ-ಕ್ವಾರ್ಟರ್ ಫೈನಲ್‌ ಗೆ ಸಿಂಧು ಲಗ್ಗೆ

ಪಿ.ವಿ. ಸಿಂಧು | PC: PTI 

  • whatsapp icon

ನಿಂಗ್ಬೊ: ಭಾರತದ ಅಗ್ರಮಾನ್ಯ ಶಟ್ಲರ್ ಪಿ.ವಿ. ಸಿಂಧು ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ-16ರ ಘಟ್ಟ ತಲುಪಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಹೈದರಾಬಾದ್ ಆಟಗಾರ್ತಿ ಸಿಂಧು ಇಂಡೋನೇಶ್ಯದ ಎಸ್ಟರ್ ನುರುಮಿ ಟ್ರೈ ವಾರ್ಡೋಯೊ ಅವರನ್ನು 21-15, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.

ಸಿಂಧು ಅವರು ಮುಂದಿನ ಸುತ್ತಿನಲ್ಲಿ ಜಪಾನಿನ 3ನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಚೈನೀಸ್ ತೈಪೆಯ ಲೀ ಚಿಯಾ ಹಾವೊ ವಿರುದ್ಧ 18-21, 10-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ಬೇಗನೆ ನಿರ್ಗಮಿಸಿದರು.

ಎಚ್.ಎಸ್. ಪ್ರಣಯ್ ಕೂಡ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಝು ಗ್ವಾಂಗ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಕಿರಣ್ ಜಾರ್ಜ್ ಅವರು 35 ನಿಮಿಷಗಳ ಹೋರಾಟದಲ್ಲಿ ಕಝಕ್‌ಸ್ತಾನದ ಡಿಮಿಟ್ರಿ ಪನರಿನ್ ಎದುರು 21-16, 21-8 ಅಂತರದಿಂದ ಜಯ ಸಾಧಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News